×
Ad

ಐಐಟಿ ಏರೋ ಮಾಡೆಲಿಂಗ್ ಸ್ಪರ್ಧೆಯಲ್ಲಿ ನಿಟ್ಟೆ ಏರೋಕ್ಲಬ್ ವಿದ್ಯಾರ್ಥಿಗಳ ಸಾಧನೆ

Update: 2024-01-13 21:15 IST

ಕಾರ್ಕಳ: ಜ. 3 ಮತ್ತು 4 ರಂದು ಐಐಟಿ ಮದ್ರಾಸ್‌ ನಲ್ಲಿ ನಡೆದ ಪ್ರತಿಷ್ಠಿತ ಬೋಯಿಂಗ್ ಐಐಟಿ ಏರೋ ಮಾಡೆಲಿಂಗ್ ಸ್ಪರ್ಧೆಯಲ್ಲಿ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಆರು ಮಂದಿಯ ಏರೋಕ್ಲಬ್ ವಿದ್ಯಾರ್ಥಿ ತಂಡವು ಪ್ರಥಮ ಮತ್ತು ದ್ವಿತೀಯ ಬಹುಮಾನಗಳನ್ನು ಗೆದ್ದು ಗಮನಾರ್ಹ ಸಾಧನೆಯನ್ನು ಮಾಡಿದೆ.

ಪೈಲಟ್ ಆಗಿ ಸಾತ್ವಿಕ್ ಪೂಜಾರಿ, ಸಹ ಪೈಲಟ್ ಆಗಿ ಮೇಘರಾಜ್ ಎಂ ಮತ್ತು ಸಂಜನಾ ಎಸ್ ನ್ನು ಒಳಗೊಂಡ ತಂಡ ಪ್ರಥಮ ಬಹುಮಾನ ಪಡೆದರೆ ಮತ್ತು ಪೈಲಟ್ ಆಗಿ ರಿತೇಶ್ ಶೆಟ್ಟಿ, ಸಹ ಪೈಲಟ್ ಆಗಿ ಸಂಪನ್ನ ಮತ್ತು ಶ್ರಾವ್ಯ ಪ್ರಭು ಅನ್ನು ಒಳಗೊಂಡ ತಂಡವು ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News