ಉಳ್ಳಾಲ ತಾಲೂಕು ಮಟ್ಟದ ಅಧಿಕಾರಿಗಳ ಸಭೆ
ಕೊಣಾಜೆ: ರಾಜ್ಯ ಸರಕಾರ ಪ್ರತೀ ತಾಲೂಕುಗಳ ಅಭಿವೃದ್ದಿಗೆ ಹಿರಿಯ ಕೆಎಎಸ್ ಅಧಿಕಾರಿಗಳನ್ನು ನೇಮಕ ಮಾಡಿದ್ದು, ಉಳ್ಳಾಲಕ್ಕೂ ಹಿರಿಯ ಅಧಿಕಾರಿ ಪ್ರಜ್ಞಾ ಅಮ್ಮೆಂಬಳ ಅವರನ್ನು ನೇಮಿಸಿದ್ದು, ಉಳ್ಳಾಲ ತಾಲೂಕಿನ ಅಭಿವೃದ್ಧಿ ಮತ್ತು ನೂತನ ತಾಲೂಕಿನಲ್ಲಿ ಅನುಷ್ಠಾಗೊಳ್ಳಲಿರುವ ಕಾರ್ಯಗಳ ಕುರಿತು ಸಮಾಲೋಚನೆ ನಡೆಸಿ ಅಭಿವೃದ್ದಿಯನ್ನು ನಡೆಸಲಾಗುವುದು ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ತಿಳಿಸಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ಉಪನ್ಯಾಸ ಸಂಕೀರ್ಣದಲ್ಲಿ ಉಳ್ಳಾಲ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಮಂಗಳೂರು ವಿಧಾನಸಭಾ ಕ್ಷೇತ್ರವನ್ನು ಒಳಗೊಂಡಿರುವ ಉಳ್ಳಾಲ ತಾಲೂಕು ನೂತನವಾಗಿ ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿದೆ. ಚುನಾವಣೆ ನಡೆದು ಹೊಸ ಸರಕಾರ ರಚನೆಯಾಗಿ ಎಂಟು ತಿಂಗಳುಗಳು ಕಳೆದಿದ್ದು, ಇದೀಗ ಅಭಿವೃದ್ಧಿ ಕಾರ್ಯಗಳಿಗೆ ಬೇಕಾದ ಅನುದಾನ ಸೇರಿದಂತೆ ಇಲಾಖಾವಾರು ಕಚೇರಿ ನಿರ್ಮಾಣಕ್ಕೆ ಬೇಕಾದ ಸ್ಥಳ ಪರಿಶೀಲನೆ ಆಗಬೇಕಾಗಿದ್ದು, ಕಂದಾಯ ಇಲಾಖೆಯಡಿ ನಡೆಯುತ್ತಿರುವ ತಾಲೂಕಿನ ಪ್ರಗತಿಯ ವಿವರನ್ನು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಸಹಭಾಗಿತ್ವದಲ್ಲಿ ಉಳ್ಳಾಲ ತಾಲೂಕನ್ನು ಸುಸಜ್ಜಿತವಾಗಿ ಆರಂಬಿಸಲು ಪೂರಕವಾಗಲಿದೆ ಎಂದರು.
ಗಣರಾಜ್ಯೋತ್ಸವ ತಾಲೂಕಿನಲ್ಲಿ ಎರಡನೇ ವರ್ಷದ ಆಚರಣೆ : ತಾಲೂಕು ಅಸ್ತಿತ್ವಕ್ಕೆ ಬಂದ ಬಳಿಕ ಎರಡನೇ ವರ್ಷದ ಗಣರಾಜ್ಯೋತ್ಸವ ಆಚರಣೆಗೆ ಬೇಕಾದ ಸಿದ್ಧತೆಗಳನ್ನು ನಡೆಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಕಳೆದ ವರ್ಷದಂತೆ ಜಿಲ್ಲೆಯ ಅತೀ ಎತ್ತರದ ಧ್ವಜಸ್ಥಂಭದಲ್ಲಿ ತ್ರಿವರ್ಣ ಧ್ವಜವನ್ನು ಧ್ವಜಾರೋಹಣ ಮಾಡಲಾಗುವುದು. ವಿದ್ಯಾರ್ಥಿಗಳನ್ನು ಈ ಕಾರ್ಯಕ್ರಮದಲ್ಲಿ ಜೋಡಿಸುವ ನಿಟ್ಟಿನಲ್ಲಿ ತಾಲೂಕು ವ್ಯಾಪ್ತಿಯ ಶಾಲೆಗಳಿಗೆ ಮಾಹಿತಿ ನೀಡಲು ಸೂಚಿಸಲಾಗಿದೆ ಎಂದರು.
ಸಭೆಯಲ್ಲಿ ನೂತಬವಾಗಿ ಸರಕಾರದಿಂದ ಉಳ್ಳಾಲ ತಾಲೂಕಿಗೆ ನಿಯೋಜಿಸಲ್ಪಟ್ಟಿರುವ ಉಸ್ತುವಾರಿ ಅಧಿಕಾರಿ ಪ್ರಜ್ಞಾ ಅಮ್ಮೆಂಬಳ, ತಹಶೀಲ್ದಾರ್ ಬಿ.ಎ. ಪುಟ್ಟರಾಜು, ಕಾರ್ಯನಿರ್ವಹಣಾಧಿಕಾರಿ ಶೈಲಾ ಕಾರಗಿ, ಉಳ್ಳಾಲ ನಗರಸಭಾ ಕಮಿಷನರ್ ವಾಣಿ ವಿ. ಆಳ್ವ, ಸೋಮೇಶ್ವರ ಪುರಸಭಾ ಮುಖ್ಯಾಧಿಕಾರಿ ಮತ್ತಡಿ, ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಮಾಲಿನಿ, ತಾಲೂಕು ಆರೋಗ್ಯ ಅಧಿಕಾರಿ ಡಾ| ಸುಜಯ್ ಭಂಡಾರಿ,, ಸಮಾಜ ಕಲ್ಯಾಣ ಅಧಿಕಾರಿ ಸುನಿತಾ, ವಲಯ ಅರಣ್ಯಾಧಿಕಾರಿ ರಾಜೇಶ್ ಬಳಿಗಾರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕರಾದ ವೀಣಾ, ತೋಟಗಾರಿಕಾ ಇಲಾಖೆಯ ಜಾಯ್ ಪ್ರದೀಪ್ ಡಿ.ಸೋಜಾ, ಕೆ. ಪ್ರವೀಣ್, ಪೊಲೀಸ್ ಇಲಾಖೆ, ಪಿಎಸ್‍ಐ, ಲೋಕೋಪ ಯೋಗಿ ಇಲಾಖೆಯ ಅಧಿಕಾರಿಗಳಾದ ಜಯಪ್ರಕಾಶ್ ಸಿ. ದಾಸ್‍ಪ್ರಕಾಶ್, ಮೆಸ್ಕಾಂನ ನಿತೇಶ್ ಹೊಸಗದ್ದೆ, ವಿನೋದ್, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಯ ಮಂಜುನಾಥ್ ಆರ್., ಶಿಕ್ಷಣ ಇಲಾಖೆಯ ವಿಷ್ಣ್ಣು ನಾರಾಯಣ ಹೆಬ್ಬಾರ್, ಪ್ರಶಾಂತ್ ಕೆ.ಎಸ್., ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಆಡಳಿತ ಅಧಿಕಾರಿಗಳು, ಉಳ್ಳಾಲ ತಾಲೂಕು ಕಂದಾಯ ಇಲಾಖೆಯ ಉಪತಹಶೀಲ್ದಾರ್ ಬಿ. ನವನೀತ ಮಾಳವ, ಕಂದಾಯ ನಿರೀಕ್ಷಕ ಪ್ರಮೋದ್ ಕುಮಾರ್, ಎಡಿಎಂ ಕಿರಣ್ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.