×
Ad

ಮಂಗಳೂರು: ವಿಶ್ವಕರ್ಮ ಯುವ ಸಮಾವೇಶ

Update: 2024-01-28 20:19 IST

ಮಂಗಳೂರು, ಜ.28: ವಿಶ್ವಕರ್ಮ ಯುವ ಮಿಲನ್ ರಾಜ್ಯ ಸಮಿತಿ ಹಾಗೂ ವಿಶ್ವಕರ್ಮ ಯಜ್ಞ-ಯುವ ಸಮಾವೇಶ ಸಮಿ ತಿಯ ವತಿಯಿಂದ ರವಿವಾರ ನಗರದ ಬಂಗ್ರಕೂಳೂರಿನ ಗೋಲ್ಡ್ ಫಿಂಚ್ ಸಿಟಿ ಮೈದಾನದಲ್ಲಿ ವಿಶ್ವಕರ್ಮ ಯುವ ಸಮಾವೇಶ ಜರುಗಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಸಂಸದ ನಳಿನ್ ಕುಮಾರ್ ಮಾತನಾಡಿ ‘ವಿಶ್ವಕರ್ಮ ಸಮಾಜ ದೇಶಕ್ಕೆ ಅಪಾರವಾದ ಕೊಡುಗೆಗಳನ್ನು ನೀಡಿವೆ. ಪರಂಪರೆ, ಸಂಸ್ಕೃತಿ, ಸಂಸ್ಕಾರ ಉಳಿಸಿಕೊಂಡು ಮುಂದಿನ ಸಮಾಜಕ್ಕೂ ಈ ಸಮಾಜ ವಿಶೇಷ ಕೊಡುಗೆ ನೀಡುತ್ತಿದೆ ಎಂದರು.

ಉಡುಪಿ ಪಡು ಕುತ್ಯಾರಿನ ಶ್ರೀಮದ್ ಆನೆಗುಂದಿ ಮಹಾಸಂಸ್ಥಾನಂ ಸರಸ್ವತಿ ಪೀಠದ ಅನಂತಶ್ರೀ ವಿಭೂಷಿತ ಕಾಳ ಹಸ್ತೇಂದ್ರ ಸರಸ್ವತಿ ಸ್ವಾಮೀಜಿ, ಹಾಸನ ಜಿಲ್ಲೆಯ ಅರಕಲಗೂಡು ಅರೆಮಾದನಹಳ್ಳಿಯ ಶ್ರೀವಿಶ್ವಕರ್ಮ ಜಗದ್ಗುರು ಪೀಠದ ಪೀಠಾಧೀಶ್ವರ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಆರ್ಶೀವಚನ ನೀಡಿದರು.

ಈ ಸಂದರ್ಭ ವಿಶ್ವಕರ್ಮ ಸಮಾಜದ ಏಳು ಮಂದಿ ಸಾಧಕರನ್ನು ಸನ್ಮಾನಿಸಲಾಯಿತು. ವಿಶ್ವಕರ್ಮ ಮಹಾ ಯಜ್ಞ, ವಿಶ್ವ ಕರ್ಮ ಕಲಾ ಪ್ರದರ್ಶನ ವೈವಿಧ್ಯಮಯ ನೃತ್ಯ ಸ್ಪರ್ಧೆ, ಕಲಾಕೃತಿಗಳ ಪ್ರದರ್ಶನ, ಪ್ರತಿಭಾ ಪ್ರತಿಯೋಗಿತಾ ಆನ್‌ಲೈನ್ ಸ್ಪರ್ಧೆಗಳು ನಡೆಯಿತು. ವಿಶ್ವಕರ್ಮ ಆ್ಯಪ್ ಬಿಡುಗಡೆ ಮಾಡಲಾಯಿತು. ವಿಶ್ವಕರ್ಮ ಸಮಾಜ ಹಾಗೂ ಗುರುಪಂರಪರೆಯ ಕುರಿತು ಲೋಕೇಶ್ ಎಂ.ಬಿ. ಆಚಾರ್ ಹಾಗೂ ಪ್ರಸ್ತುತ ಕಾಲಘಟ್ಟದಲ್ಲಿ ವಿಶ್ವಕರ್ಮ ಸಮಾಜ ಕುರಿತು ವಾರುಣಿ ನಾಗರಾಜ್ ಆಚಾರ್ಯ ವಿಶೇಷ ಉಪನ್ಯಾಸ ನೀಡಿದರು.

ವೇದಿಕೆಯಲ್ಲಿ ಮಾಜಿ ಸಚಿವ ಬಿ. ರಮಾನಾಥ ರೈ, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ವಿಶ್ವಕರ್ಮ ಯಜ್ಞ -ಯುವ ಸಮಾವೇಶ ಸಮಿತಿಯ ಅಧ್ಯಕ್ಷ ನಾಗರಾಜ ಆಚಾರ್ಯ, ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷ ಮಧು ಆಚಾರ್ಯ ಮುಲ್ಕಿ, ಮಂಗಳೂರು ಶ್ರೀಕಾಳಿಕಾಂಬ ವಿನಾಯಕ ದೇವಸ್ಥಾನ ಆಡಳಿತಾಧಿಕಾರಿ ಉಮೇಶ ಆಚಾರ್ಯ, ಮೂಡುಬಿದಿರೆ ಗುರುಮಠ ಕಾಳಿಕಾಂಬ ದೇವಸ್ಥಾನದ ಪುರೋಹಿತ್ ಜಯಕರ ಆಚಾರ್ಯ, ಸಮಿತಿಯ ಸುಂದರ ಆಚಾರ್ಯ ಮರೋಳಿ, ಕೈಂತಿಲ ಸದಾಶಿವ ಆಚಾರ್ಯ, ಬಿ.ನಾಗರಾಜ ಆಚಾರ್ಯ, ನೀತಾ ಆರ್ ಆಚಾರ್ಯ, ಜಯಂತಿ ಕೇಶವ ಆಚಾರ್ಯ, ಅರುಣಾ ಸುರೇಶ್, ಗೀತಾ ನಾಗೇಂದ್ರನಾಥ್, ಸಂದೀಪ್ ಆಚಾರ್ಯ, ಶ್ರವಣ್ ಹರೀಶ್ ಆಚಾರ್ಯ ಉಪಸ್ಥಿತರಿದ್ದರು.

ವಿಶ್ವ ಕರ್ಮ ಯುವ ಮಿಲನ್ ರಾಜಾಧ್ಯಕ್ಷ ವಿಕ್ರಂ ಐ. ಆಚಾರ್ಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಬೆಳುವಾಯಿ ಸುಂದರ ಆಚಾರ್ಯ ಸ್ವಾಗತಿಸಿದರು. ಸುಂದರ ಆಚಾರ್ಯ ಮರೋಳಿ ವಂದಿಸಿದರು. ಚೈತ್ರಾ ಕೋಟ ಹಾಗೂ ಪಶುಪತಿ ಉಳ್ಳಾಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News