×
Ad

ದ.ಕ. ಜಿಲ್ಲೆಯ ವಿವಿಧೆಡೆ ಸಂವಿಧಾನ ಜಾಗೃತಿ ಜಾಥಾ, ಸ್ತಬ್ದ ಚಿತ್ರ ಪ್ರದರ್ಶನ

Update: 2024-01-29 21:25 IST

ಮಂಗಳೂರು: ಸಂವಿಧಾನದ ಆಶಯ ಮತ್ತು ಮೌಲ್ಯಗಳನ್ನು ಒಳಗೊಂಡ ಸಂವಿಧಾನ ಜಾಗೃತಿ ಜಾಥಾ ಸ್ತಬ್ದ ಚಿತ್ರ ದ.ಕ. ಜಿಲ್ಲೆಯ ವಿವಿಧೆಡೆ ಸಂಚರಿಸಿತು.

ತಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೆ.ಸಿ.ರೋಡ್‌ನಲ್ಲಿ ಪ್ರದರ್ಶಿಸಲಾಯಿತು. ಭಾರತ ಸಂವಿಧಾನದ ಆಚರಣೆ ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಲಾಯಿತು. ಸಾರ್ವಜನಿಕರಿಗೆ ಡಾ.ಬಿ.ಆರ್. ಅಂಬೇಡ್ಕರ್ ಸಾಧನೆ ಬಗ್ಗೆ ಬರೆದ ಪುಸ್ತಕಗಳನ್ನು ನೀಡಿ ಸ್ವಾಗತಿಸಲಾಯಿತು.

ಬಳಿಕ ಸಂವಿಧಾನ ಜಾಗೃತಿ ಜಾಥಾ ಸ್ತಬ್ದ ಚಿತ್ರವನ್ನು ಉಳ್ಳಾಲ ತಾಲೂಕು ಕಿನ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನಕಮುಗೇರು ಜಂಕ್ಷನ್ ಬಳಿ ಪ್ರದರ್ಶಿಸಲಾಯಿತು.

ಅಪರಾಹ್ನ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧ ಚಿತ್ರವನ್ನು ಉಳ್ಳಾಲ ತಾಲೂಕಿನ ಅಂಬ್ಲಮೊಗರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮದಕ ಜಂಕ್ಷನ್ ಬಳಿ ಪ್ರದರ್ಶಿಸಲಾಯಿತು. ಕರ್ನಾಟಕ ಸರಕಾರದ ಮಹತ್ವಕಾಂಕ್ಷಿ ಯೋಜನೆಗಳ ಬಗ್ಗೆ ಮಾಹಿತಿಯನ್ನು ಒಳಗೊಂಡ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.

ರವಿವಾರ ಪೂರ್ವಾಹ್ನ ಸಂವಿಧಾನ ಜಾಗೃತಿ ಜಾಥಾ ಸ್ತಬ್ಧ ಚಿತ್ರವನ್ನು ಉಳ್ಳಾಲ ತಾಲೂಕು ಹರೇಕಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಿಸಾನ್ ನಗರ ಬಳಿ ಪ್ರದರ್ಶಿಸಲಾಯಿತು. ಭಾರತ ಸಂವಿಧಾನದ ಆಚರಣೆ ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಲಾಯಿತು. ಜೊತೆಗೆ ಕರ್ನಾಟಕ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಬಗ್ಗೆ ಮಾಹಿತಿಯನ್ನೊಳಗೊಂಡ ಬೀದಿ ನಾಟಕವನ್ನು ಪ್ರದರ್ಶಿಸಲಾಯಿತು.

ಅಪರಾಹ್ನ ಕೊಣಾಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಣಾಜೆ ಜಂಕ್ಷನ್ ಬಸ್ಸು ನಿಲ್ದಾಣದ ಬಳಿ ಪ್ರದರ್ಶಿಸಲಾಯಿತು. ಸಂವಿಧಾನದ ಮಹತ್ವದ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿ ಅರಿವು ಮೂಡಿಸಲಾಯಿತು.

ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ದೇರಳಕಟ್ಟೆ ಜಂಕ್ಷನ್ ಬಸ್ಸು ಮತ್ತು ರಿಕ್ಷಾ ನಿಲ್ದಾಣದ ಬಳಿ ಪ್ರದರ್ಶಿಸಲಾಯಿತು. ಮಂಜನಾಡಿ ಗ್ರಾಮ ಪಂಚಾಯತ್, ನರಿಂಗಾನ ಪಂಚಾಯತ್ ಎಡಪದವು ಗ್ರಾಮ ಪಂಚಾಯತ್, ಕುಪ್ಪೆಪದವು ಗ್ರಾಮ ಪಂಚಾಯತ್, ಮುಚ್ಚೂರು ಗ್ರಾಮ ಪಂಚಾಯತ್, ಬಡಗ ಎಡಪದವು ಗ್ರಾಮ ಪಂಚಾಯತ್,ಮುತ್ತೂರು ಗ್ರಾಮ ಪಂಚಾಯತ್ ಗಳಲ್ಲಿ ಸಂವಿಧಾನ ರಥ ಸಂಚರಿಸಿ ಭಾರತ ಸಂವಿಧಾನದ ಆಚರಣೆ ಮತ್ತು ಅದರ ಬಗ್ಗೆ ಜಾಗೃತಿ ಮೂಡಿಸಲಾಯಿತು.

ವಿವಿದೆಡೆ ಜಾಥಾ ಆಗಮನ ಸಂದರ್ಭದಲ್ಲಿ ಸ್ಥಳೀಯ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಓದುವುದು, ಉಪನ್ಯಾಸ, ಸಂವಿಧಾನ ಗೀತೆ ಗಾಯನ, ಕಲಾ ಪ್ರದರ್ಶನ ಏರ್ಪಡಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News