×
Ad

ಬಿ.ಎ.ಎಂ.ಎಸ್ ಪದವಿ ಪರೀಕ್ಷೆ: ಡಾ.ಖದೀಜತ್ ದಿಲ್ಶಾನಗೆ ರ‍್ಯಾಂಕ್‌

Update: 2024-02-10 22:12 IST

ಮಂಗಳೂರು: ಪ್ರತಿಷ್ಠಿತ ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಬೆಂಗಳೂರು, ಕರ್ನಾಟಕ ಇವರು ನಡೆಸಿದ ಆಯುರ್ವೇದ ವೈದ್ಯಕೀಯ (ಬಿ.ಎ.ಎಂ.ಎಸ್) ಪದವಿ ಪರೀಕ್ಷೆಯಲ್ಲಿ ಡಾ.ಖದೀಜತ್ ದಿಲ್ಶಾನ ರ‍್ಯಾಂಕ್‌ ಪಡೆದಿದ್ದಾರೆ.

ಆಯುರ್ವೇದ ವಿಭಾಗದ ಚರಕ ಸಂಹಿತಾ ಪೂರ್ವಾರ್ಧದಲ್ಲಿ ಒಂದನೇ ರ‍್ಯಾಂಕ್‌, ಮೌಲಿಕ ಸಿದ್ಧಾಂತದಲ್ಲಿ ಎರಡನೇ ರ‍್ಯಾಂಕ್‌, ರಿಸರ್ಚ್ ಮೆಥಾಡೋಲಜಿ ವಿಷಯದಲ್ಲಿ ಮೂರನೇ ರ‍್ಯಾಂಕ್‌ ಪಡೆದಿರುವ ತಾಲೂಕಿನ ಪ್ರತಿಭಾನ್ವಿತ ವಿದ್ಯಾರ್ಥಿನಿ ಕೆಯ್ಯೂರು ಗ್ರಾಮದ ಮಾಡವು ನಿವಾಸಿಯಾಗಿರುವ ಡಾ.ಖದೀಜತ್ ದಿಲ್ಶಾನ ಅವರು ಪ್ರಸ್ತುತ ಸರಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು ಇಲ್ಲಿ ಎಂ.ಯಸ್. ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಇವರು ಮೊಹಮ್ಮದ್ ಕುಂಞಿ ಮತ್ತು ನೆಬಿಸಾ ದಂಪತಿಯ ಪುತ್ರಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News