×
Ad

ಬ್ಯಾರಿ ಪರಿಷತ್‌ನಿಂದ ಭಾಷಣ ತರಬೇತಿ ಶಿಬಿರ

Update: 2024-02-11 22:12 IST

ಮಂಗಳೂರು: ಉತ್ತಮ ಸಂದೇಶ ನೀಡುವ ಮೂಲಕ ಭಾಷಣವು ಸಾಮಾಜಿಕ ಸಾಮರಸ್ಯಕ್ಕೆ ಬುನಾದಿಯಾಗಬೇಕೇ ಹೊರತು ಘರ್ಷಣೆಗೆ ಕಾರಣವಾಗಬಾರದು ಎಂದು ತೆಕ್ಕಿಲ್ ಪ್ರತಿಷ್ಟಾನದ ಅಧ್ಯಕ್ಷ ಟಿ.ಎಂ. ಶಹೀದ್ ಹೇಳಿದರು.

ಅಖಿಲ ಭಾರತ ಬ್ಯಾರಿ ಪರಿಷತ್ ವತಿಯಿಂದ ರವಿವಾರ ನಗರದ ನ್ಯಾಷನಲ್ ಟ್ಯೂಟೋರಿಯಲ್ ಸಭಾಂಗಣದಲ್ಲಿ ನಡೆದ ಬ್ಯಾರಿ ಭಾಷಣ ತರಬೇತಿ ಶಿಬಿರವನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.

ಯುವಪೀಳಿಗೆಗೆ ಭಾಷಣ ಕಲಿಸಿಕೊಡುವ ಮೂಲಕ ತರಬೇತಿದಾರ ಖಾಲಿದ್ ಉಜಿರೆ ಸಮಾಜಕ್ಕೆ ಆದರ್ಶ ನಾಯಕರನ್ನು ಕೊಡುಗೆಯಾಗಿ ನೀಡುವಂತಾಗಲಿ ಎಂದ ಅವರು ಬ್ಯಾರಿ ಪರಿಷತ್ತಿನ ಈ ಕಾರ್ಯಕ್ರಮವು ಸಮಾಜಕ್ಕೆ ಮಾದರಿಯಾಗಿದೆ ಎಂದರು.

ಪರಿಷತ್ ಸ್ಥಾಪಕಾಧ್ಯಕ್ಷ ಜೆ. ಹುಸೈನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಪೊರೇಟರ್ ಅಬ್ದುಲ್ಲತೀಫ್ ಕಂದಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಮಾಜಿ ಉಪಮೇಯರ್ ಮುಹಮ್ಮದ್ ಕುಂಜತಬೈಲ್, ಪರಿಷತ್ ಉಪಾಧ್ಯಕ್ಷ ಡಾ. ಸಿದ್ದೀಕ್ ಅಡ್ಡೂರು ಮಾತನಾಡಿದರು.

ವ್ಯಕ್ತಿತ್ವ ವಿಕಸನ ಸಂಸ್ಥೆಯ ರಾಜ್ಯ ತರಬೇತಿದಾರ ಜೇಸಿ ಯು.ಎಚ್.ಖಾಲಿದ್ ಉಜಿರೆ ಭಾಷಣ ತರಬೇತಿ ನೀಡಿದರು. ಪರಿಷತ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ನಡುಪದವು ಸ್ವಾಗತಿಸಿದರು. ಕೋಶಾಧಿಕಾರಿ ನಿಸಾರ್ ಮುಹಮ್ಮದ್ ವಂದಿಸಿ ದರು. ಹಿರಿಯ ಸಲಹೆಗಾರ ಯೂಸುಫ್ ವಕ್ತಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News