×
Ad

ಎಸ್‌ಜೆಎಂ ದ.ಕ ಜಿಲ್ಲಾ ಈಸ್ಟ್ ಸಮಿತಿಯ ನೂತನ ಕಚೇರಿ ಉದ್ಘಾಟನೆ

Update: 2024-02-14 22:34 IST

ಉಪ್ಪಿನಂಗಡಿ: ಇಸ್ಲಾಮಿಕ್ ಶಿಕ್ಷಣ ಮಂಡಳಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮದ್ರಸಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಲಾಗುತ್ತಿದೆ, ದೇಶದ ಐಕ್ಯತೆ, ಶಾಂತಿ ಸೌಹಾರ್ದತೆ, ಸಹಿಷ್ಣುತೆಯ ಪಾಠವನ್ನು ಹೇಳಿಕೊಡಲಾಗುತ್ತಿದೆ ಎಂದು ಸುನ್ನೀ ಜಂ ಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ, ಖಾಝಿ ಝೈನುಲ್ ಉಲಮಾ ಶೈಖುನಾ ಮಾಣಿ ಉಸ್ತಾದ್ ಹೇಳಿದ್ದಾರೆ.

ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ ದಕ್ಷಿಣ ಕನ್ನಡ ಜಿಲ್ಲಾ ಈಸ್ಟ್ ಸಮಿತಿಯ, ನೆಕ್ಕಿಲಾಡಿ ಮೇದರಬೆಟ್ಟು ಕಾಂಪ್ಲೆಕ್ಸ್‌ ನಲ್ಲಿ ನೂತನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು.

ಮಕ್ಕಳನ್ನು ದೇಶದ ಸತ್ಪ್ರಜೆಯಾಗಿ ಬೆಳೆಸುವಲ್ಲಿ, ಮದ್ರಸ ಅಧ್ಯಾಪಕರು ಪ್ರಬುದ್ಧರಾಗಿದ್ದಾರೆ. ಮುಅಲ್ಲಿಂ ವಿದ್ವಾಂಸರು ಈ ದೇಶದ, ಸಮಾಜದ, ಸಮುದಾಯದ ಬೆಲೆಬಾಳುವ ಸೊತ್ತಾಗಿದ್ದಾರೆ ಅವರನ್ನು ಗೌರವಿಸಿ ಅನುಸರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಅತ್ಯಂತ ಅಗತ್ಯವೂ, ಆಕರ್ಷಣೀಯವಾದ ಹವಾನಿಯಂತ್ರಿತ ಈ ಕಚೇರಿ ಹಾಗೂ ಮುಅಲ್ಲಿಂ ವಿದ್ವಾಂಸರ ಈ ಒಕ್ಕೂಟವು ಸರ್ವ ಸಂಘಟನೆಗಳಿಗೂ ಮಾದರಿಯಾಗಲಿ ಎಂದು ಶುಭ ಹಾರೈಸಿದರು.

ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಪುಂಡೂರು ಇಬ್ರಾಹೀಂ ಸಖಾಫಿ ಸುಳ್ಯ ವಹಿಸಿದ್ದರು. ಸುನ್ನೀ ಮಾನೇಜ್ಮೆಂಟ್ ಅಸೋಸಿಯೇಷನ್ ರಾಜ್ಯಾಧ್ಯಕ್ಷ ಸಯ್ಯಿದ್ ಇಸ್ಮಾಯೀಲ್ ತಂಳ್ ಮದನಿ ಉಜಿರೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ ರಾಜ್ಯಾಧ್ಯಕ್ಷ ಜೆಪ್ಪು ಅಬ್ದುರ‌್ರಹ್ಮಾನ್ ಮದನಿ ಶುಭ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಹಿರಿಯ ವಿದ್ವಾಂಸರಾದ ಕಾಸಿಂ ಮದನಿ ಕರಾಯ, ಎಸ್ಸೆಂ ಕೋಯ ತಂಳ್ ಉಜಿರೆ, ಮುಫತ್ತಿಶ್ ಮುಹಮ್ಮದ್ ಹನೀಫ್ ಮಿಸ್ಬಾಹಿ, ಜಿಲ್ಲಾ ಕೋಶಾಧಿಕಾರಿ ಕಾಸಿಂ ಸಖಾಫಿ ವಿಟ್ಲ, ಇಬ್ರಾಹೀಂ ಸಅದಿ ಅಲ್ ಅಫ್ಳಲಿ ನೆಕ್ಕಿಲಾಡಿ, ಕಟ್ಟಡ ಉಪ್ಪಿನಂಗಡಿ ಎಸ್‌ಎಂಎ ರೀಜನಲ್ ಅಧ್ಯಕ್ಷ ಇಸಾಕ್ ಹಾಜಿ ಮೇದರಬೆಟ್ಟು, ಅಬ್ದುರ‌್ರಹ್ಮಾನ್ ಹಾಜಿ ಅರಿಯಡ್ಕ, ರೆನಲ್ ಅಧ್ಯಕ್ಷ ಮುಹಮ್ಮದ್ ಹಾಜಿ ನೆಕ್ಕಿಲಾಡಿ, ಅಡ್ವೊಕೇಟ್ ಶಾಕಿರ್ ಹಾಜಿ, ಜಿಲ್ಲಾ ನಾಯಕ ಇಬ್ರಾಹೀಂ ಸಖಾಫಿ ಕಬಕ, ಹಮೀದ್ ಸಅದಿ ಬೇಂಗಿಲ, ಸಿರಾಜುದ್ದೀನ್ ಸಖಾಫಿ ಮಠ, ಅಬ್ದುಲ್ ರಝಾಕ್ ಲತೀಫಿ ಕುಂತೂರು, ನಿಝಾರ್ ಸಖಾಫಿ ಸುಳ್ಯ, ಅಬ್ಬಾಸ್ ಮುಸ್ಲಿಯಾರ್ ಬೈತಡ್ಕ, ಅಬ್ದುಲ್ ಖಾದರ್ ಸಅದಿ ಕನ್ಯಾನ, ಉಮರುಲ್ ಫಾರೂಕ್ ಸಖಾಫಿ, ಇಬ್ರಾಹೀಂ ಸಅದಿ, ಶರೀಫ್ ಸಖಾಫಿ ಪುತ್ತೂರು, ಇಸ್ಮಾಯಿಲ್ ಮದನಿ ಬೆಳ್ತಂಗಡಿ, ಸಂಘ ಕುಟುಂಬಗಳ ನಾಯಕರಾದ ಅಬ್ದುಲ್ ಹಮೀದ್ ಸೋಮಂತಡ್ಕ, ಉಸ್ಮಾನ್ ಸೋಕಿಲ, ಡಾಕ್ಟರ್ ಫಾರೂಕ್, ಉಮರ್ ತಾಜ್, ಸುಲೈಮಾನ್ ನೆಲ್ಯಾಡಿ, ಶುಕೂರ್ ಮೇದರಬೆಟ್ಟು, ಶರೀಫ್ ಸಖಾಫಿ ಉಜಿರ್ಬೆಟ್ಟು, ಮುಹಿಯುದ್ದೀನ್ ಉಜಿರೆ, ಫಾರೂಕ್ ಮೇದರಬೆಟ್ಟು, ಸಿದ್ದೀಕ್ ಸಅದಿ ವಳಾಲು, ಅಬೂಬಕರ್ ಮುಸ್ಲಿಯಾರ್ ನೀರಕಟ್ಟೆ, ಹನೀಫ್ ಮುಸ್ಲಿಯಾರ್ ಉಜಿರೆ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ನಡೆಸಲಾಯಿತು. ಇದೇ ವೇಳೆ ಕಟ್ಟಡ ಮಾಲಕ ಇಸಾಕ್ ಹಾಜಿ ಮೇದರಬೆಟ್ಟು, ಇಂಜಿನಿಯರ್ ಅಮೀರ್ ಮದನಿ ಕಡೇಶಿವಾಲಯ, ಮುಹಮ್ಮದ್ ತೌಸೀಫ್ ಪಟ್ಟೂರ್ ಇವರನ್ನು ಆಭಿನಂದಿಸಲಾಯಿತು.

ಜಿಲ್ಲಾ ಸದಸ್ಯರು, ಜಿಲ್ಲಾ ವ್ಯಾಪ್ತಿಯ 15 ರೇಂಜ್‌ಗಳ ಪದಾಧಿಕಾರಿಗಳು, ಮುಅಲ್ಲಿಂ ವಿದ್ವಾಂಸರು, ಸಂಘಟನಾ ಪ್ರತಿನಿಧಿ ಗಳು ಭಾಗವಹಿಸಿದ್ದರು. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News