×
Ad

ಭಾರತದ ಜಲಪ್ರದೇಶದಲ್ಲಿ ಚೀನಾ ಬೋಟ್: ಕರಾವಳಿ ಕಾವಲು ಪಡೆ ಅಲರ್ಟ್

Update: 2024-02-22 22:12 IST

ಸಾಂದರ್ಭಿಕ ಚಿತ್ರ

ಮಂಗಳೂರು, ಫೆ.22: ಭಾರತೀಯ ಜಲಪ್ರದೇಶದಲ್ಲಿ ಚೀನಾದ ಬೋಟ್ ಕಂಡು ಬಂದಿದ್ದು, ಕರಾವಳಿ ಕಾವಲು ಪಡೆಯ ಪೊಲೀಸರು ಹಾಗೂ ಕೋಸ್ಟ್‌ ಗಾರ್ಡ್‌ ಅಲರ್ಟ್ ಆಗಿದ್ದಾರೆ.

ಮೂರು ದಿನಗಳ ಹಿಂದೆ ಹೊನ್ನಾವರದಿಂದ ಆಳಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ರಾಜ್ಯದ ಬೋಟ್‌ನಲ್ಲಿದ್ದ ಮೀನುಗಾರರು ಸುಮಾರು 200 ನಾಟಿಕಲ್ ಮೈಲು ದೂರದಲ್ಲಿ ಬೇರೆ ದೇಶದ ಬೋಟ್‌ವೊಂದನ್ನು ಸಮೀಪದಿಂದ ನೋಡಿ ಚಿತ್ರೀಕರಣ ಮಾಡಿದ್ದರು ಎನ್ನಲಾಗಿದೆ.

ಅನಂತರ ಕುಮಟಾ ಪೊಲೀಸರು, ಕರಾವಳಿ ಕಾವಲು ಪಡೆ ಮತ್ತು ಕೋಸ್ಟ್‌ಗಾರ್ಡ್‌ನವರಿಗೆ ಮಾಹಿತಿ ನೀಡಿದ್ದರು. ಈ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕಿದಾಗ ಅದು ಚೀನಾದ ಬೋಟ್ ಎಂಬ ವಿಚಾರ ಬೆಳಕಿಗೆ ಬಂದಿತ್ತು.

ಪತ್ತೆಯಾದ ‘ಬಿವಿಕೆವೈ5’ ಹೆಸರಿನ ಬೋಟ್ ಚೀನಾದ ಪುಝು ಬಂದರಿನಲ್ಲಿ ನೋಂದಣಿಯಾಗಿರುವ ಮಾಹಿತಿ ಪೊಲೀಸರಿಗೆ ಲಭಿಸಿದೆ. ಈ ಬಗ್ಗೆ ಕುಮಟಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News