ಗೂಡ್ಸ್ ಗಾಡಿ ಢಿಕ್ಕಿ: ಪಾದಚಾರಿ ಮೃತ್ಯು
Update: 2024-02-23 21:42 IST
ಕುಂದಾಪುರ, ಫೆ.23: ರಸ್ತೆ ದಾಟುತಿದ್ದ ಹಿರಿಯ ನಾಗರಿಕರಿಗೆ ವೇಗವಾಗಿ ಬಂದ ಗೂಡ್ಸ್ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ತಲೆ ಹಾಗೂ ಸೊಂಟಕ್ಕೆ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ಗುರುವಾರ ರಾತ್ರಿ 7:50ರ ಸುಮಾರಿಗೆ ಹಂಗಳೂರು ಗ್ರಾಮದ ಶಬರಿ ಹೊಟೇಲ್ ಎದುರಿನ ರಾ.ಹೆದ್ದಾರಿ 66ರಲ್ಲಿ ಸಂಭವಿಸಿದೆ.
ಮೃತರನ್ನು ಅನಂತಯ್ಯ (68) ಎಂದು ಗುರುತಿಸಲಾಗಿದೆ.
ಅವರು ಮನೆಗೆ ತೆರಳವುದಕ್ಕಾಗಿ ರಸ್ತೆ ದಾಟಲು ನಿಂತಿದ್ದಾಗ ಕುಂದಾಪುರ ಕಡೆಯಿಂದ ವೇಗವಾಗಿ ಬಂದ ಗೂಡ್ಸ್ ವಾಹನ ಢಿಕ್ಕಿ ಹೊಡೆದಿತ್ತು. ರಸ್ತೆಗೆ ಬಿದ್ದು ಗಾಯಗೊಂಡ ಅವರನ್ನು ಮೊದಲು ಕುಂದಾಪುರ ಸರಕಾರಿ ಆಸ್ಪತ್ರೆಗೆ ಬಳಿಕ ಮಣಿಪಾಲ ಆಸ್ಪತ್ರೆಗೆ ದಾಖಲಿಸಿದ್ದು, ರಾತ್ರಿ 10 ಗಂಟೆ ಸುಮಾರಿಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟರು.
ಈ ಬಗ್ಗೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.