×
Ad

ಗುರುಪುರ ಬ್ಲಾಕ್ ವ್ಯಾಪ್ತಿಯ ವಲಯ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರ ನೇಮಕ

Update: 2024-02-29 22:12 IST

ಗುರುಪುರ: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಗುರುಪುರ ಬ್ಲಾಕ್ ವ್ಯಾಪ್ತಿಯ ವಲಯ ಕಾಂಗ್ರೆಸ್ ಸಮಿತಿಯ ನೂತನ ಅಧ್ಯಕ್ಷರನ್ನು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಅಲಿ ಅವರ ನಿರ್ದೇಶನದಂತೆ ನೇಮಕ ಮಾಡಿ ಗುರುಪುರ ಬ್ಲಾಕ್‌ ಅಧ್ಯಕ್ಷ ಸುರೇಂದ್ರ ಕಂಬಳಿ ಅವರು ಆದೇಶ ಹೊರಡಿಸಿದ್ದಾರೆ.

ತಿರುವೈಲು ವಲಯಾಧ್ಯಕ್ಷರಾಗಿ ರಾಜ್‌ ಕುಮಾರ್‌ ಶೆಟ್ಟಿ, ಗುರುಪುರ- ಪುರುಷೋತ್ತಮ ಮಲ್ಲಿ, ಕಂದಾವರ- ವಿಜಯಾ ಸುವರ್ಣ, ಪಡುಪೆರಾರ- ಇಕ್ಬಾಲ್‌ ಹಲ್ಯಾರ್‌, ಮುಚ್ಚೂರು- ರಾಜೇಂದ್ರ ಪಿಂಟೊ, ಬಡಗ ಎಡಪದವು- ಮೋಹನ್‌ ಕರ್ಕೇರ, ತೆಂಕ ಎಡಪದವು- ನವೀನ್‌ ಎಸ್.‌, ಕುಪ್ಪೆಪದವು-ಅಬ್ದುಲ್‌ ರಝಾಕ್‌, ಮುತ್ತೂರು- ಚಂದ್ರಹಾಸ ಶೆಟ್ಟಿ, ಗಂಜಿಮಠ- ಮುಸ್ತಫಾ ಗಂಜಿಮಠ, ಉಳಾಯಿಬೆಟ್ಟು- ಶರೀಫ್‌ ಕನಿಬೆಟ್ಟು, ಮಲ್ಲೂರು- ಸುದೀರ್‌ ರಾವ್‌, ನೀರುಮಾರ್ಗ- ವಾಲ್ಟರ್‌ ಡಿಕುನ್ಹಾ ಮತ್ತು ಅಡ್ಯಾರ್‌ ವಲಯದ ಅಧ್ಯಕ್ಷರಾಗಿ ರೋನಾಲ್ಡ್‌ ಫಾಸ್ಕರ್‌ ಸಲ್ಡಾನ ಅವರು ಆಯ್ಕೆಯಾಗಿದ್ದಾರೆ.

ನೂತನವಾಗಿ ಆಯ್ಕೆಗೊಂಡಿರುವ ವಲಯಾಧ್ಯಕ್ಷರು ತಮಗೆ ವಹಿಸಿರುವ ಜವಾಬ್ದಾರಿಯನ್ನು ಸಮರ್ತವಾಗಿ ನಿರ್ವಹಿಸಿ ವಲಯ ಮಟ್ಟದಲ್ಲಿ ಪಕ್ಷ ಸಂಘಟಿಸುವಲ್ಲಿ ಯಶಸ್ವಿಯಾಗಬೇಕೆಂದು ಬ್ಲಾಕ್‌ ಅಧ್ಯಕ್ಷ ಸುರೇಂದ್ರ ಕಂಬಳಿ ಅವರು ಹೊರಡಿಸಿರುವ ಆದೇಶದಲ್ಲಿ ತಿಳಿಸಿದ್ದಾರೆ.



 


Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News