ಕಾವೂರು: ಕಾಂಗ್ರೆಸ್ ಕಾರ್ಯಕರ್ತರ ಸಭೆ
ಮಂಗಳೂರು : ಸುರತ್ಕಲ್ ಮತ್ತು ಗುರುಪುರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಗುರುವಾರ ಕಾವೂರು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಚುನಾವಣಾ ಪೂರ್ವಭಾವಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು.
ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಮಾತನಾಡಿ ಬಿಜೆಪಿಗೆ ಸೋಲಿನ ಭಯ ಶುರುವಾಗಿದೆ. ಅದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಆರಂಭಿಸಿದ್ದಾರೆ. ಆದರೆ ತಾನು ಇದುವರೆಗೆ ಯಾವುದೇ ಅಪಪ್ರಚಾರ ಮಾಡುವುದಿಲ್ಲ.ಪಕ್ಷದ ಕಾರ್ಯಕರ್ತರು ಜನರ ಬಳಿಗೆ ಹೋದಾಗ ತಲೆ ಏತ್ತಿ ಮಾತಾಡುವಂತೆ ಮಾಡುತ್ತೇನೆ. ಹಾಗಾಗಿ ಈ ಲೋಕಸಭಾ ಚುನಾವಣೆಯ ಗೆಲುವು ನಿಮ್ಮ ಗೆಲುವು ಎಂದರು.
ಮಾಜಿ ಸಚಿವ ರಮಾನಾಥ ರೈ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಇನಾಯತ್ ಆಲಿ, ಕೆಪಿಸಿಸಿ ಉಪಾಧ್ಯಕ್ಷ ಐವನ್ ಡಿಸೋಜ, ಡಿಸಿಸಿ ಅಧ್ಯಕ್ಷ ಹರೀಶ್ ಕುಮಾರ್ ಮಾತನಾಡಿದರು.
ಪಕ್ಷದ ಮುಖಂಡರಾದ ರಾಕೇಶ್ ಮಲ್ಲಿ, ಸದಾಶಿವ ಶೆಟ್ಟಿ, ಪೃಥ್ವಿರಾಜ್, ಸುರೇಂದ್ರ ಕಾಂಬ್ಳಿ, ಜಯಶೀಲಾ ಅಡ್ಯಂತಾಯ, ಶಶಿಧರ್ ಹೆಗ್ಡೆ, ಗಿರೀಶ್ ಆಳ್ವ, ಎಂ.ಜಿ. ಹೆಗಡೆ, ಅನಿಲ್ ಕುಮಾರ್, ಹರಿನಾಥ್, ಕೃಷ್ಣಪ್ಪಅಮೀನ್, ಕವಿತಾ ಸನಿಲ್, ನವೀನ್ ಡಿಸೋಜ, ಶ್ಯಾಲೆಟ್ ಪಿಂಟೋ, ಪ್ರತಿಭಾ ಕುಳಾಯಿ ಮತ್ತಿತರರು ಉಪಸ್ಥಿತರಿದ್ದರು.