ಅಕ್ರಮ ಕಸಾಯಿಖಾನೆ ಆರೋಪ: ಮೂವರ ಬಂಧನ
Update: 2024-03-28 21:59 IST
ಮಂಗಳೂರು : ನಗರ ಹೊರವಲಯದ ವಳಚ್ಚಿಲ್‌ನ ಮನೆಯೊಂದರಲ್ಲಿ ನಡೆಯುತ್ತಿದೆ ಎನ್ನಲಾದ ಅಕ್ರಮ ಕಸಾಯಿಖಾನೆಗೆ ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.
ಅಡ್ಯಾರ್ ವಳಚ್ಚಿಲ್ ನಿವಾಸಿ ಖಾದರ್ ಯಾನೆ ಮೋನು (52), ಮಾರಿಪ್ಪಳ ನಿವಾಸಿ ಇಸ್ಮಾಯಿಲ್ (27), ಅಡ್ಯಾರ್‌ಪದವು ನಿವಾಸಿ ಶವೀರ್ (18) ಬಂಧಿತ ಆರೋಪಿಗಳು.
ವಳಚ್ಚಿಲ್‌ನ ಖಾದರ್ ಮನೆಯ ಶೆಡ್‌ನಲ್ಲಿ ಅಕ್ರಮವಾಗಿ ಕಸಾಯಿ ನಿರ್ಮಿಸಿದ್ದಾರೆ ಎಂಬ ದೂರು ಕೇಳಿ ಬಂದ ಮೇರೆಗೆ ಪೊಲೀಸರು ದಾಳಿ ನಡೆಸಿದರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಮಂಗಳೂರು ದಕ್ಷಿಣ ವಿಭಾಗದ ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ನಿರೀಕ್ಷಕ ಶಿವಕುಮಾರ್, ಅರುಣ್ ಕುಮಾರ್ ಮತ್ತಿತರರು ಪಾಲ್ಗೊಂಡಿದ್ದರು.