ನಳಿನಾಕ್ಷಿ ಉದಯರಾಜ್‌ರ ಕೃತಿ ಬಿಡುಗಡೆ
ಮಂಗಳೂರು, ಮೇ 25: ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಸಹಯೋಗದಲ್ಲಿ ಸುಶಾಂತ ಪ್ರಕಾಶನದ ಆಶ್ರಯದಲ್ಲಿ ಕೃತಿ ಬಿಡುಗಡೆ ಕಾರ್ಯಕ್ರಮವು ಶನಿವಾರ ನಗರದ ಮಹಿಳಾ ಸಭಾ ಭವನದಲ್ಲಿ ನಡೆಯಿತು.
ನಳಿನಾಕ್ಷಿ ಉದಯರಾಜ್ ಅವರ ಱಬದುಕಿನ ಸತ್ಯಗಳುೞ ಸಮಕಾಲಿನ ಚಿಂತನೆಗಳ ಸಂಕಲನ ಮತ್ತು ಸ್ವಾತಿಮುತ್ತು ಚುಟುಕು ಸಂಕಲನವನ್ನು ಹಿರಿಯ ಲೇಖಕಿ ಬಿ.ಎಂ. ರೋಹಿಣಿ ಮತ್ತು ಹಿರಿಯ ಲೇಖಕ ಸದಾನಂದ ನಾರಾವಿ ಅನಾವರಣಗೊಳಿಸಿದರು.
ಆಳ್ವಾಸ್ ಕಾಲೇಜಿನ ಉಪನ್ಯಾಸಕಿ ಡಾ. ಸುಧಾರಾಣಿ ಱಬದುಕಿನ ಸತ್ಯಗಳು - ಸಮಕಾಲಿನ ಚಿಂತನೆಗಳ ಸಂಕಲನ ಹಾಗೂ ಲೇಖಕ ರವೀಂದ್ರ ನಾಯಕ್ ಸಣ್ಣಕ್ಕಿ ಬೆಟ್ಟು ಸ್ವಾತಿಮುತ್ತು ಚುಟುಕು ಸಂಕಲನವನ್ನು ಪರಿಚಯಸಿದರು.
ಹಿರಿಯ ಸಾಹಿತಿ ಮುದ್ದು ಮೂಡುಬೆಳ್ಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕರಾವಳಿ ಲೇಖಕಿಯರ-ವಾಚಕಿಯರ ಸಂಘದ ಅಧ್ಯಕ್ಷೆ ಜ್ಯೊತಿ ಚೇಲ್ಯಾರ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಿವೃತ ಸೇನಾಧಿಕಾರಿ ಕುಂಬ್ಳೆ ಶಿವಕುಮಾರ್, ಸುಶಾಂತ್ ರಾಜ್ ಉಪಸ್ಥಿತರಿದ್ದರು. ನಳಿನಾಕ್ಷಿ ಉದಯರಾಜ್ ಸ್ವಾಗತಿಸಿದರು. ರತ್ನಾವತಿ ಜೆ. ಬೈಕಾಡಿ ಆಶಯ ಗೀತೆಯನ್ನಾಡಿದರು. ವಿಜಯಲಕ್ಷ್ಮಿ ಕಟೀಲು ಕಾರ್ಯಕ್ರಮ ನಿರೂಪಿಸಿದರು, ಅಕ್ಷತಾ ಅನಿಕೇತ್ ವಂದಿಸಿದರು.