ದೇರಳಕಟ್ಟೆ: ಮಳೆಗೆ ಆವರಣ ಗೋಡೆ ಕುಸಿದು ಜಖಂಗೊಂಡ ಕಾರುಗಳು
Update: 2024-05-25 19:41 IST
ಕೊಣಾಜೆ; ದೇರಳಕಟ್ಟೆಯ ಆಸ್ಪತ್ರೆಯೊಂದರ ಬಳಿ ಮರದ ಮಿಲ್ ನ ಆವರಣಗೋಡೆಯೊಂದು ಕುಸಿದು ಬಿದ್ದ ಪರಿಣಾಮ ಎರಡು ಕಾರುಗಳು ಜಖಂಗೊಂಡಿರುವ ಘಟನೆ ಶನಿವಾರ ಸಂಜೆ ನಡೆದಿದೆ.
ಕಳೆದ ಕೆಲವು ದಿನಗಳಿಂದ ಈ ಭಾಗದಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು ಆವರಣ ಗೋಡೆಯ ಅಡಿಪಾಯದ ಮಣ್ಣು ಕುಸಿದು ಆವರಣ ಗೋಡೆಯೂ ಕುಸಿದು ಬಿದ್ದಿದೆ. ಇದರ ಪರಿಣಾಮ ಇಲ್ಲೇ ನಿಲ್ಲಿಸಲಾಗಿದ್ದ ಎರಡು ಕಾರುಗಳು ಜಖಂ ಗೊಂಡು ಹಾನಿಯಾಗಿದೆ. ಕುಸಿದು ಬಿದ್ದ ಸಂದರ್ಭದಲ್ಲಿ ಕಾರಿನೊಳಗೆ ಯಾರೂ ಇಲ್ಲದ ಕಾರಣ ಹೆಚ್ಚಿನ ಅಪಾಯ ತಪ್ಪಿದಂತಾಗಿದೆ. ಆಸ್ಪತ್ರೆಗೆ ಬಂದಿದ್ದವರು ಇಲ್ಲಿ ಕಾರು ಪಾರ್ಕ್ ಮಾಡಿ ತೆರಳಿದ್ದರು. ಅಲ್ಲದೆ ಇಲ್ಲೇ ನಿಲ್ಲಿಸಲಾಗಿದ್ದ ಕೈಗಾಡಿಗೂ ಹಾನಿಯಾಗಿದೆ.