ಸುರತ್ಕಲ್: ಗಾಂಜಾ ಸಹಿತ ಆರೋಪಿ ಸೆರೆ
ಸುರತ್ಕಲ್: ಎನ್ಐಟಿಕೆ ಬೀಚ್ ರಸ್ತೆಯಲ್ಲಿ ಗಾಂಜಾ ಸಹಿತ ಓರ್ವನನ್ನು ಸುರತ್ಕಲ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಬಂಧಿತರನ್ನು ಬಿ. ಕಸಬ ಬಂಟ್ವಾಳ ನಿವಾಸಿ ವಿಖ್ಯಾತ್ ( 28) ಎಂದು ತಿಳಿದು ಬಂದಿದ್ದು, ಈತನಿಗೆ ಗಾಂಜಾ ನೀಡಿದ್ದ ಮಂಗಳೂರು ನಿವಾಸಿ ಶಶಿಕಾಂತ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಂಧಿತನಿಂದ 20 ಸಾವಿರ ರೂ.ಮೌಲ್ಯದ 942 ಗ್ರಾಂ ಗಾಂಜಾ, 15 ಸಾವಿರ ರೂ. ಬೆಲೆ ಬಾಳುವ ಎರಡು ಮೊಬೈಲ್ ಗಳು, 5 ಲಕ್ಷ ರೂ. ಮೌಲ್ಯದ ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಸೋಮವಾರ ಬೆಳಗ್ಗೆ ಎನ್ ಐಟಿಕೆ ಬೀಚ್ ರಸ್ತೆಯಲ್ಲಿ ಗಾಂಜಾ ಮಾರಾಟ ನಡೆಸುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಯಂತೆ ಸುರತ್ಕಲ್ ಪೊಲೀಸರು ದಾಳಿ ಮಾಡಿ ಆರೋಪಿ ವಿಖ್ಯಾತ್ ನನ್ನು ಬಂಧಿಸಿದ್ದಾರೆ. ಶಶಿಕಾಂತ ಎಂಬಾತನಿಂದ ತನ್ನ ಸ್ವಂತ ಉಪಯೋಗಕ್ಕೆ 942 ಗ್ರಾಂ ಗಾಂಜಾವನ್ನು ಪಡೆದಿರುವುದಾಗಿ ವಿಖ್ಯಾತ್ ಹೇಳಿಕೆ ನೀಡಿದ್ದು, ಅದರಂತೆ ಶಶಿಕಾಂತ ಎಂಬಾತನ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.