×
Ad

ಕಳವು ಪ್ರಕರಣಗಳ ತಡೆಗಟ್ಟಲು ಕ್ರಮ: ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್

Update: 2024-06-26 19:19 IST

ಮಂಗಳೂರು, ಜೂ.26: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಳೆಗಾಲ ಸಮಯದಲ್ಲಿ ಆಗಿಂದಾಗ್ಗೆ ಹಗಲು ಮತ್ತು ರಾತ್ರಿ ಕಳವು ಪ್ರಕರಣಗಳು ವರದಿಯಾಗುತ್ತಿದ್ದು, ಇವುಗಳನ್ನು ತಡೆಗಟ್ಟಲು ಮತ್ತು ಪತ್ತೆ ಹಚ್ಚಲು ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

ಕಳವು ಪ್ರಕರಣಗಳನ್ನು ತಡೆಯುವ ನಿಟ್ಟಿನಲ್ಲಿ ಹಗಲು ಮತ್ತು ರಾತ್ರಿ ವೇಳೆ ಹೆಚ್ಚಿನ ಸಂಖ್ಯೆಯ ಈ ಹಿಂದೆ ಠಾಣೆಗಳಲ್ಲಿ ದಸ್ತಗಿರಿಯಾಗಿದ್ದ ಆರೋಪಿಗಳ (ಎಂಒಬಿ) ಚಲನವಲನಗಳ ಮೇಲೆ ನಿಗಾ ಇರಿಸಿ ಅವರು ನೀಡಿದ್ದ ವಿಳಾಸದಲ್ಲಿ ಅವರ ಇರುವಿಕೆಯನ್ನು ಚೆಕ್ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.

ಜೂ.25 ರಂದು ರಾತ್ರಿ ಮಂಗಳೂರು ನಗರ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಒಟ್ಟು 31 ಎಂಒಬಿಗಳ ಮನೆಗೆ ಅನಿರೀಕ್ಷಿತ ವಾಗಿ ಭೇಟಿ ನೀಡಿ ಅವರ ಇರುವಿಕೆಯನ್ನು ಪರಿಶೀಲಿಸಲಾಗಿದೆ. ಅವರೆಲ್ಲರೂ ನೀಡಿದ್ದ ವಿಳಾಸಗಳಲ್ಲಿ ಹಾಜರಿದ್ದರು. ಈ ಕಾರ್ಯಾಚರಣೆ ಪ್ರತಿನಿತ್ಯ ನಡೆಯಲಿದ್ದು, ಕಳವು ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News