ಪಾವೂರು ಕುದ್ರುವಿನಲ್ಲಿ ಅನಧಿಕೃತ ಮರಳು ಗಣಿಗಾರಿಕೆ ಕಂಡು ಬಂದಿಲ್ಲ: ಗಣಿ ಇಲಾಖೆ ಸ್ಪಷ್ಟನೆ
ಸಾಂದರ್ಭಿಕ ಚಿತ್ರ
ಮಂಗಳೂರು: ಉಳ್ಳಾಲ ತಾಲೂಕು ಪಾವೂರು ಕುದ್ರು ಎಂಬಲ್ಲಿ ಜೂನ್ 21 ರಂದು ಅನಧಿಕೃತವಾಗಿ ಸಾಮಾನ್ಯ ಮರಳನ್ನು ಗಣಿಗಾರಿಕೆ ನಡೆಸುತ್ತಿದ್ದಾರೆ ಎಂದು ಮಾಧ್ಯಮದಲ್ಲಿ ಭಿತ್ತರವಾದ ಸುದ್ದಿಯ ಹಿನ್ನೆಲೆಯಲ್ಲಿ ಕಚೆೇರಿಯ ಹಿರಿಯ ಭೂ ವಿಜ್ಞಾನಿ ಯವರೊನ್ನೊಳಗೊಂಡ ತಾಂತ್ರಿಕ ಅಧಿಕಾರಿಗಳ ತಂಡವು ಜೂನ್ 24 ರಂದು ಪಾವೂರು ಕುದ್ರು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಈ ಕುದ್ರುವಿನ ಪೂರ್ವಕ್ಕೆ ಸಾವಯವ ಮಣ್ಣು ಮಿಶ್ರಿತ ಮರಳು ಜರುಗಿದ್ದು, ಉಳಿದಂತೆ ಕುದ್ರುಅಖಂಡವಾಗಿರುವುದು ಕಂಡು ಬಂದಿದ್ದು, ಕುದ್ರುವಿನ ಪೂರ್ವಕ್ಕೆ ಇರುವ ಅರುಗು ಜರುಗಲು ಕಾರಣವೇನೆಂದರೆ ಗಿಡ ಮರಗಳ ಅಭಾವ ಅಂದರೆ ಸದರಿ ಪ್ರದೇಶದಲ್ಲಿಅರುಗನ್ನು ಹಿಡಿದಿಟ್ಟುಕೊಳ್ಳಲು ಪೂರಕವಾದ ಬೇರು ಬಿಡುವ ಮತ್ತು ಅರುಗನ್ನು ಸಂರಕ್ಷಿಸುವ ಕಾಂಡ್ಲ ಗಿಡಗಳು ಇಲ್ಲದಿರುವುದು ಹಾಗೂ ಬಿರುಸಾದ ನೀರಿನ ಹರಿವಿನಿಂದಆಗಿರುತ್ತದೆ ಮತ್ತು ಸ್ಥಳ ಪರಿಶೀಲನೆಯ ಸಂದರ್ಭದಲ್ಲಿ ಯಾವುದೇ ಅನಧಿಕೃತ ಸಾಮಾನ್ಯ ಮರಳು ಗಣಿಗಾರಿಕೆ ಚಟುವಟಿಕೆ ನಡೆಯುತ್ತಿರುವುದು ಕಂಡುಬಂದಿರುವುದಿಲ್ಲ.
ದೃಶ್ಯ ಮಾಧ್ಯಮಗಳಲ್ಲಿ ಪ್ರಸಾರವಾದ ಮರಳು ತೆಗೆಯುವ ದೃಶ್ಯಗಳು ಹಳೆಯಾದಾಗಿದ್ದು ಮತ್ತು ಈ ದ್ವೀಪದ ಬಳಿ ಈಚೆಗೆ ಯಾವುದೇ ಮರಳು ತೆಗೆದಿಲ್ಲದೇ ಇರುವುದು ಪ್ರದೇಶದಲ್ಲಿರುವ ಒಣಗಿದ ಮತ್ತು ಸರಿದಿರುವ ಸಾವಯವ ಮಣ್ಣು ಮಿಶ್ರಿತ ಮಣ್ಣಿನ ಮೇಲೆ ಬೆಳೆದಿರುವ ಮಜ್ಜಿಗೆ ಹುಲ್ಲು ಖಾತ್ರಿಯಾಗಿರುತ್ತದೆ. ಕಂದಾಯ ಇಲಾಖೆಯ ದಾಖಲೆಯಂತೆ ಕುದ್ರುವಿನ ಒಟ್ಟು ವಿಸ್ತೀರ್ಣವು 30.49 ಎಕರೆ ಆಗಿದ್ದು, ಭೌತಿಕವಾಗಿ ಪರಿಶೀಲಿಸಿದಾಗ ಕುದ್ರುವಿನ ವಿಸ್ತೀರ್ಣವು 98.02 ಎಕರೆ ಇದ್ದು, ಕುದ್ರುವಿನ ಯಾವುದೇ ಭಾಗವು ನದಿಯಲ್ಲಿ ಮುಳುಗಡೆಗೊಂಡಿರುವುದಿಲ್ಲ ಎಂದುಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.