×
Ad

ಕದ್ರಿ ಕಂಬಳದಲ್ಲಿ ಹಲಸು -ಮಾವು ಮೇಳ| ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸಬೇಕಾಗಿದೆ: ಎಡನೀರು ಶ್ರೀ

Update: 2024-06-29 20:38 IST

ಮಂಗಳೂರು,ಜೂ.29: ಸಾವಯವ ಕೃಷಿಯ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ನಾವಿಂದು ಮಾಡಬೇಕಾಗಿದೆ ಎಂದು ಎಂದು ಎಡನೀರು ಮಠದ ಶ್ರೀ ಸಚ್ಚಿದಾನಂದ ಸ್ವಾಮೀಜಿ ಹೇಳಿದ್ದಾರೆ.

ಕಲ್ಕೂರ ಪ್ರತಿಷ್ಠಾನದ ವತಿಯಿಂದ ಸಾವಯವ ಕೃಷಿಕ ಗ್ರಾಹಕ ಬಳಗದ ಸಹಯೋಗದಲ್ಲಿ ಕದ್ರಿಕಂಬಳದ ಮುಂಜು ಪ್ರಾಸಾದ ಆವರಣದಲ್ಲಿ ಆರಂಭಗೊಂಡ ಎರಡು ದಿನಗಳ ಹಲಸು -ಮಾವು ಮೇಳದ ಉದ್ಘಾಟನಾ ಸಮಾರಂಭದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು.

ನಾವಿಂದು ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇವೆ. ಇದಕ್ಕೆ ಕಾರಣ ನಮಗೆ ನಾವು ಹಿರಿಯರು ಅನುಸರಿಸು ತ್ತಿದ್ದ ಕೃಷಿ ವಿಧಾನದಿಂದ ಹಿಂದೆ ಸರಿದಿರುವುದು. ಸ್ವಾವಲಂಬನೆ ಹಾಗೂ ಆರೋಗ್ಯಕರ ಬದುಕಿಗೆ ಪ್ರಕೃತಿಯೇ ನಮಗೆ ವರದಾನವಾಗಿದೆ

ಹಿರಿಯ ಸಾಮಾಜಿಕ ಕಾರ್ಯ ಕರ್ತೆ ಆರೂರು ಲಕ್ಷ್ಮೀ ರಾವ್ ಮೇಳ ಉದ್ಘಾಟಿಸಿದರು. ಉದ್ಯಮಿ ವೆಂಕಟರಮಣ ಪೋತಿ ಮಾರಾಟ ಮಳಿಗೆ ಉದ್ಘಾಟಿಸಿದರು. ಕೃಷಿ ತಜ್ಞ ಶ್ರೀಪಡ್ರೆ ಸಾವಯವ ಜಾಗೃತಿ ಸಂದೇಶ ನೀಡಿದರು. ಕಟೀಲು ಕ್ಷೇತ್ರದ ಪ್ರಧಾನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ ಶುಭ ಹಾರೈಸಿದರು.ಡಾ.ಮುರಳೀಧರ ಯಡಿಯಾಳ್ ಹಲಸು ಮತ್ತು ಮಾವಿನ ಬಗ್ಗೆ ವೈಜ್ಞಾನಿಕ ವಿಶ್ಲೇಷಣೆ ಮಾಡಿದರು.

ಮನಪಾ ಸದಸ್ಯೆ ಶಕಿಲಾ ಕಾವ, ಶಾರದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಎಂ.ಬಿ.ಪುರಾಣಿಕ್, ಶರವು ರಾಘವೇಂದ್ರ ಶಾಸ್ತ್ರಿ, ಡಾ.ಜೀವರಾಜ್ ಸೊರಕೆ, ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ.ಹರೀಶ್ ರೈ ಮುಖ್ಯ ಅತಿಥಿಗಳಾಗಿದ್ದರು.

ಪ್ರದೀಪ್ ಕುಮಾರ್ ಕಲ್ಕೂರ ಸ್ವಾಗತಿಸಿದರು. ಸುಧಾಕರ ರಾವ್ ಪೇಜಾವರ ಮತ್ತು ದಯಾನಂದ ಕಟೀಲ್ ಕಾರ್ಯಕ್ರಮ ನಿರೂಪಿಸಿದರು.





Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News