×
Ad

ಕಾಂಗ್ರೆಸ್ ಪರಿಶಿಷ್ಟ ಘಟಕದಿಂದ ಕುದ್ಮುಲ್ ರಂಗರಾವ್ ಜನ್ಮದಿನಾಚರಣೆ

Update: 2024-06-29 22:01 IST

ಮಂಗಳೂರು: ನಗರ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟ ಘಟಕದ ವತಿಯಿಂದ ಕುದ್ಮುಲ್ ರಂಗರಾವ್ ಅವರ 165ನೇ ಜನ್ಮದಿನ ಕಾರ್ಯಕ್ರಮವು ಶನಿವಾರ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಜರಗಿತು.

ಕಾರ್ಯಕ್ರಮದಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ, ಪುಷ್ಪಾ ಅಮರ್‌ನಾಥ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಕಾಸ್ ಸಾಲ್ಯಾನ್, ಕೆಪಿಸಿಸಿ ಸದಸ್ಯೆ ಎಸ್.ಅಪ್ಪಿ, ಡಿಸಿಸಿ ಉಪಾಧ್ಯಕ್ಷ ಸಂತೋಷ್ ಕುಮಾರ್ ಶೆಟ್ಟಿ, ಹಿಂದುಳಿದ ವರ್ಗದ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್, ಮ.ನ.ಪಾ ಸದಸ್ಯರಾದ ಸತೀಶ್ ಪೆಂಗಲ್, ಚೇತನ್ ಕುಮಾರ್, ತನ್ವೀರ್ ಶಾ, ಮುಖಂಡರಾದ ಗಿರೀಶ್ ಶೆಟ್ಟಿ, ರಾಕೇಶ್ ದೇವಾಡಿಗ, ನೆಲ್ಸನ್ ಮೊಂತೇರೊ, ರೂಪಾ ಚೇತನ್, ವಸಂತಿ, ಅನುಪಮಾ ರಘುವೀರ್, ರವಿಚಂದ್ರ, ಪ್ರತಾಪ್ ಸಾಲ್ಯಾನ್, ಸುರೇಂದ್ರ, ಪ್ರೇಮ್ ಬಳ್ಳಾಲ್ ಭಾಗ್, ಸುರೇಶ್ ನಂತೂರ್, ನಮಿತ್, ಸದಾಶಿವ ಬಲಿಪತೋಟ, ಲೋಲಾಕ್ಷಿ, ಪದ್ಮಾವತಿ ಪೆರ್ಲ, ರಮೇಶ್ ಕೋಟ್ಯಾನ್, ದೇವೇಂದ್ರ ಕಾಪಿಕಾಡ್, ಸಂಜೀವ ಬೆಂಜನಪದವು ಉಪಸ್ಥಿತರಿದ್ದರು.

ಬ್ಲಾಕ್ ಪರಿಶಿಷ್ಟ ಘಟಕಾಧ್ಯಕ್ಷ ದಿನೇಶ್ ಬಲಿಪತೋಟ ಸ್ವಾಗತಿಸಿದರು. ಕಾರ್ಯದರ್ಶಿ ಪ್ರವೀಣ್ ದಡ್ಡಲ್‌ಕಾಡ್ ವಂದಿಸಿದರು. ಕಿರಣ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.

 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News