×
Ad

ಎಸ್‌ವೈಎಸ್ ಕಿನ್ಯ ಸರ್ಕಲ್ ದಅ್‌ವಾ ವಿಭಾಗದಿಂದ ಉಲಮಾ ಮೀಟ್

Update: 2024-07-24 19:22 IST

ಮಂಗಳೂರು: ಎಸ್‌ವೈಎಸ್ ಕಿನ್ಯ ಸರ್ಕಲ್ ದಅ್‌ವಾ ವಿಭಾಗದ ವತಿಯಿಂದ ಉಲಮಾ ಮೀಟ್ ಕಾರ್ಯಕ್ರಮವು ಕಿನ್ಯ ಬೆಳರಿಂಗೆ ಸುನ್ನಿ ಸೆಂಟರ್‌ನಲ್ಲಿ ಮಂಗಳವಾರ ನಡೆಯಿತು.

ಧರ್ಮ ಜ್ಞಾನ ಪಡೆದವರ ಮಹತ್ವ ಮತ್ತು ಜವಾಬ್ದಾರಿ ಎಂಬ ವಿಷಯದಲ್ಲಿ ಮಂಜೇಶ್ವರ ಮಳ್ಹರ್ ವಿದ್ಯಾ ಸಮುಚ್ಚಯದ ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಜಲಾಲುದ್ದೀನ್ ಸಅದಿ ಅಲ್‌ಬುಖಾರಿ ತಂಙಳ್ ತರಗತಿ ನಡೆಸಿದರು.

ಸರ್ಕಲ್ ಸಮಿತಿಯ ಅಧ್ಯಕ್ಷ ಮಹ್ಬೂಬುರ‌್ರಹ್ಮಾನ್ ಸಖಾಫಿ ಕಿನ್ಯ ಅಧ್ಯಕ್ಷತೆಯಲ್ಲಿ ನಡೆಯಿತು. ರಾಜ್ಯ ಸಮಿತಿಯ ನಾಯಕ ಅಶ್ ಅರಿಯ್ಯಾ ಮುಹಮ್ಮದ್ ಅಲಿ ಸಖಾಫಿ ಉದ್ಘಾಟಿಸಿದರು. ಕಣ್ಣಂಗಾರ್ ಮುದರ್ರಿಸ್ ಅಶ್ರಫ್ ಸಖಾಫಿ ಶುಭ ಹಾರೈಸಿ ದರು. ಕಾರ್ಯಕ್ರಮದಲ್ಲಿ ಸಯ್ಯಿದ್ ಝೈನುಲ್ ಆಬಿದೀನ್ ಸಅದಿ ತಂಳ್ ಮೀಂಪ್ರಿ, ಇಝ್ಝುದ್ದೀನ್ ಅಹ್ಸನಿ, ಕಿನ್ಯ ವ್ಯಾಪ್ತಿಯ ಕರ್ನಾಟಕ ಮುಸ್ಲಿಂ ಜಮಾಅತ್, ಎಸ್‌ವೈಎಸ್, ಎಸೆಸ್ಸೆಫ್ ನಾಯಕರು ಉಪಸ್ಥಿತರಿದ್ದರು.

ಕಿನ್ಯ ಸರ್ಕಲ್ ದಅ್‌ವಾ ಕಾರ್ಯದರ್ಶಿ ಉಮರುಲ್ ಫಾರೂಕ್ ಸಖಾಫಿ ಮೀಂಪ್ರಿ ಸ್ವಾಗತಿಸಿದರು. ಸರ್ಕಲ್ ಸಮಿತಿ ಉಪಾಧ್ಯಕ್ಷ ಪಿ.ಎಂ. ಉಸ್ಮಾನ್ ಝುಹ್ರಿ ಕುರಿಯ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News