ಉಳ್ಳಾಲ: ಹಳೆಕೋಟೆ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆ ವತಿಯಿಂದ ವನಮಹೋತ್ಸವ
ಉಳ್ಳಾಲ: ಹಳೆಕೋಟೆ ಸಯ್ಯದ್ ಮದನಿ ಶಿಕ್ಷಣ ಸಂಸ್ಥೆ ವತಿಯಿಂದ ವನಮಹೋತ್ಸವ ಮತ್ತು ವಿದ್ಯಾರ್ಥಿ ಸಂಸತ್ತು ಉದ್ಘಾಟನಾ ಕಾರ್ಯಕ್ರಮ ಶನಿವಾರ ನಡೆಯಿತು.
ದೇರಳೆಕಟ್ಟೆ ಯೂನಿಯನ್ ಬ್ಯಾಂಕ್ ಸೀನಿಯರ್ ಮೆನೇಜರ್ ಶಾಹಿದ್ ಹುನ್ಗುಂದ್ ಗಿಡನಡುವ ಮೂಲಕ ವನ ಮಹೋತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ,ಪ್ರತಿಯೊಂದು ದಿನಕ್ಕೂ ಮಹತ್ವವಿದೆ, ಆದರೆ ವನಮಹೋತ್ಸವದ ಮೂಲಕ ನಾವು ನಟ್ಟ ಗಿಡ ನಮ್ಮ ಮುಂದಿನ ಪೀಳಿಗೆಗೆ ಸಹಕಾರಿಯಾಗುತ್ತದೆ,ಹಾಗೂ ಸಾವಿರಾರು ಗಿಡಮರಗಳು ಹೆಮ್ಮರವಾಗಿ ಬೆಳೆದು ಮುಂದಿನ ತಲೆಮಾರಿಗೆ ಫಲ ನೀಡುತ್ತದೆ ಎಂದರು.
ಉಳ್ಳಾಲ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಫಾರೂಕ್ ಯು.ಎಚ್ ಗಿಡಕ್ಕೆ ನೀರು ಹಾಕುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಶಿಕ್ಷಕರು ಎಷ್ಟು ಚೆನ್ನಾಗಿ ಮಕ್ಕಳನ್ನು ಪ್ರೀತಿಸುತ್ತಾರೋ, ಅಷ್ಟೇ ಚೆನ್ನಾಗಿ ಮಕ್ಕಳು ಶಿಕ್ಷಕರನ್ನು ಪ್ರೀತಿಸಬೇಕು, ಶಿಕ್ಷಕರ ಪಾತ್ರವನ್ನು ನಾವು ಸದಾ ನೆನಪಿನಲ್ಲಿಡುತ್ತೇವೆ ಎಂದರು.
ಟಿಪ್ಪು ಸುಲ್ತಾನ್ ಶಿಕ್ಷಣ ಸಂಸ್ಥೆಯ ನಿವೃತ್ತ ಮುಖ್ಯೋಪದ್ಯಾಯ ಎಮ್.ಎಚ್ ಮಲಾರ್ ವಿದ್ಯಾರ್ಥಿ ಸಂಸತ್ತನ್ನು ಉದ್ಘಾಟಿಸಿ ಮಾತನಾಡಿದರು.
ಉಳ್ಳಾಲ ನಗರ ಸಭೆ ಸದಸ್ಯ ಅಬ್ದುಲ್ ಜಬ್ಬಾರ್, ದೇರಳೆಕಟ್ಟೆ ಯೂನಿಯನ್ ಬ್ಯಾಂಕ್ ಸಹಾಯಕ ಮೆನೇಜರ್ ಅಗ್ನೀವ, ಹಳೆಕೋಟೆ ಶಾಲೆಯ ಸಂಚಾಲಕ ಇಸ್ಮಾಯಿಲ್ ಹಾಜಬ್ಬ, ಝೈನುದ್ದೀನ್ ಹಾಜಿ, ಎಮ್.ಎಚ್ ಇಬ್ರಾಹಿಮ್, ಶಾಲಾ ಕಾರ್ಯದರ್ಶಿ ಅಲ್ತಾಪ್ ಯು.ಎಚ್, ಕೋಶಾಧಿಕಾರಿ ಕರೀಮ್ ಯು.ಎಚ್ ಮೊದಲಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳು, ಶಿಕ್ಷಕರು ವನಮಹೋತ್ಸವದ ಬಗ್ಗೆ ಮಾತನಾಡಿದರು, ಮತ್ತು ವಿದ್ಯಾರ್ಥಿ ನಾಯಕರುಗಳಿಗೆ ಬ್ಯಾಜ್ ವಿತರಿಸಲಾಯಿತು. ಸಯ್ಯದ್ ಮದನಿ ಶಿಕ್ಷಣ ಸಂಸ್ಥೆಯ ಮುಖ್ಯೋಪದ್ಯಾಯರಾದ ಕೆ.ಎಂ.ಕೆ ಮಂಜನಾಡಿ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು, ಶಿಕ್ಷಕಿ ಶಶಿಕಲಾ ಕಾರ್ಯಕ್ರಮ ನಿರೂಪಿದರು, ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು, ಸಪ್ನಾ ವಂದಿಸಿದರು.