ಮಂಗಳೂರು: ಕೇಂದ್ರ ಬಜೆಟ್ ವಿರುದ್ಧ ಸಿಪಿಐ ಪ್ರತಿಭಟನೆ
Update: 2024-07-27 19:04 IST
ಮಂಗಳೂರು: ಕೇಂದ್ರ ಸರಕಾರದ ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನ ವಿರೋಧಿ ಬಜೆಟ್ ವಿರುದ್ಧ ಸಿಪಿಐ ದ.ಕ. ಮತ್ತು ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಶನಿವಾರ ನಗರದ ಮಿನಿವಿಧಾನಸೌಧದ ಮುಂದೆ ಪ್ರತಿಭಟನೆ ನಡೆಯಿತು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಬಿ. ಶೇಖರ್ ಮಾತನಾಡಿ ಱಈ ಬಜೆಟ್‌ನಲ್ಲಿ ರೈತರಿಗೆ ಕನಿಷ್ಠ ಬೆಂಬಲ ಬೆಲೆ ನಿರ್ಧರಿಸುವ ಬಗ್ಗೆ ಯಾವುದೇ ಸೂಚನೆ ನೀಡಿಲ್ಲ. ನಿರುದ್ಯೋಗ ಸಮಸ್ಯೆಗೆ ಪರಿಹಾರ ಕಂಡುಕೊಂಡಿಲ್ಲ. ಬೆಲೆಯೇರಿಕೆ ಗಗನ ಮುಟ್ಟುತ್ತಿದ್ದರೂ ಅದಕ್ಕೆ ಕಡಿವಾಣ ಹಾಕಿಲ್ಲ ಎಂದು ಆರೋಪಿಸಿದರು.
ಸಿಪಿಐ ಮುಖಂಡ ವಿ.ಕುಕ್ಯಾನ್ ಮಾತನಾಡಿದರು. ಪ್ರಭಾಕರ ರಾವ್, ಯಎಚ್ ರಾವ್, ಆಶಿರ್ವಾದ್, ಸುಲೋಚನಾ, ಶಮಿತಾ, ರಾಮ ಮುಗೇರ, ಒ.ಕೃಷ್ಣ, ಪ್ರವೀಣ್‌ಕುಮಾರ್, ಹರ್ಶಿತ್, ತಿಮ್ಮಪ್ಪ, ಸುಧಾಕರ ಪಾಲ್ಗೊಂಡಿದ್ದರು. ಸುರೇಶ್ ಬಂಟ್ವಾಳ್ ಕಾರ್ಯಕ್ರಮ ನಿರೂಪಿಸಿದರು. ಕರುಣಾಕರ ಮಾರಿಪಳ್ಳ ವಂದಿಸಿದರು.