ವೀಡಿಯೋ ಜರ್ನಲಿಸ್ಟ್ ನಿಗೂಢ ಸಾವಿನ ಪ್ರಕರಣದ ತನಿಖೆಗೆ ಮನವಿ
ಮಂಗಳೂರು: ವೀಡಿಯೋ ಜರ್ನಲಿಸ್ಟ್ ಹಾಗೂ ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ವಿರೇಶ್ ಕಡ್ಡಿಕೊಪ್ಲ ಅವರ ನಿಗೂಢ ಸಾವಿನ ಕುರಿತು ತನಿಖೆ ನಡೆಸುವಂತೆ ಸ್ಪೀಕರ್ ಯುಟಿ ಖಾದರ್‌ರಿಗೆ ಪತ್ರಕರ್ತರ ಸಂಘದ ಪರವಾಗಿ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ ನೇತೃತ್ವದಲ್ಲಿ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಶನಿವಾರ ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಮನವಿಗೆ ತಕ್ಷಣ ಸ್ಪಂದಿಸಿದ ಸ್ಪೀಕರ್ ಯುಟಿ ಖಾದರ್ ಗದಗ ಎಸ್‌ಪಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ವಿರೇಶ್ ನಿಗೂಢ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಸತ್ಯಾಸತ್ಯತೆ ಅರಿಯಲು ಎಸಿಪಿ ಮಟ್ಟದ ಅಧಿಕಾರಿ ಯಿಂದ ತನಿಖೆ ನಡೆಸುವಂತೆ ಸೂಚನೆ ನೀಡಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ, ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜೇಶ್ ಶೆಟ್ಟಿ, ಸಂದೇಶ್ ಜಾರ, ಸದಸ್ಯರಾದ ಉಮೇಶ್ ಕೊಟ್ಟಾರಿ, ಅಶೋಕ್, ಆದಿತ್ಯ, ಪ್ರಣಾಮ್, ನಿಖಿಲ್, ಪತ್ರಕರ್ತರಾದ ಪ್ರೀತಮ್ ರೈ, ಲಲಿತಾಶ್ರೀ ಉಪಸ್ಥಿತರಿದ್ದರು.