ನಡಿಪಟ್ಣ ಕಡಲ್ಕೊರೆತ: ಬ್ಲೂಫ್ಲ್ಯಾಗ್ ಬೀಚ್ ರಸ್ತೆ ಬಂದ್; ಪ್ರವೇಶ ನಿಷೇಧ
Update: 2024-07-27 21:39 IST
ಪಡುಬಿದ್ರಿ: ಪಡುಬಿದ್ರಿಯ ನಡಿಪಟ್ಣದಲ್ಲಿ ಉಂಟಾಗಿರುವ ಕಡಲ್ಕೊರೆತ ಪರಿಣಾಮ ಇಲ್ಲಿನ ಬೀಚ್ ರಸ್ತೆ ಕುಸಿಯುವ ಭೀತಿ ಉಂಟಾಗಿದೆ.
ಕಡಲ್ಕೊರೆತ ಉಂಟಾಗುತ್ತಿರುವ ನಡಿಪಟ್ಣದ ಶ್ರೀ ವಿಷ್ಣು ಭಜನಾ ಮಂದಿರದ ಬಳಿ ಅಂತರಾಷ್ಟ್ರೀಯ ಮಾನ್ಯತೆ ಪಡೆದ ಬ್ಲೂಫ್ಲ್ಯಾಗ್ ಬೀಚ್‌ಗೆ ತೆರಳುವ ಸಂಪರ್ಕ ರಸ್ತೆಯ ಅಡಿಭಾಗಕ್ಕೆ ಅಲೆಗಳು ಅಪ್ಪಲಿಸುತ್ತಿದ್ದು, ರಸ್ತೆ ಕುಸಿಯುವ ಭೀತಿ ಉಂಟಾಗಿದೆ. ಇದರಿಂದ ಇಲ್ಲಿರುವ ಈಗಾಗಲೇ ಬೀಚ್‌ಗೆ ತೆರಳುವ ರಸ್ತೆಯನ್ನು ಬ್ಯಾರಿಕೇಡ್ ಇಟ್ಟು ಪ್ರವಾಸಿಗರಿಗೆ ನಿರ್ಬಂಧಿಸಲಾಗಿದೆ. ಜುಲೈ 31ವರೆಗೆ ಬ್ಲೂಫ್ಲ್ಯಾಗ್ ಬೀಚ್ ವೀಕ್ಷಣೆಗೆ ಪ್ರವಾಸಿಗರಿಗೆ ಜುಲೈ 31ರವರೆಗೆ ಪ್ರವೇಶವನ್ನು ನಿಷೇಧಿಸಲಾಗಿದೆ ಎಂದು ಬ್ಲೂಫ್ಲ್ಯಾಗ್ ಬೀಚ್‌ನ ಪ್ರಬಂಧಕ ವಿಜಯ ಶೆಟ್ಟಿ ತಿಳಿಸಿದ್ದಾರೆ.