ಗುರುಪುರ: ಕೆಸರ್ಡೊಂಜಿ ದಿನ, ಆಟಿಡೊಂಜಿ ದಿನ ಕಾರ್ಯಕ್ರಮ
ಗುರುಪುರ: ವಾಮಂಜೂರು ತಿರುವೈಲಿನ ಜೈಶಂಕರ್ ಮಿತ್ರ ಮಂಡಳಿ ಮತ್ತು ಜೈಶಂಕರ್ ಮಾತೃ ಮಂಡಳಿ ಜಂಟಿಯಾಗಿ ಆಯೋಜಿಸಿದ್ದ `ಕೆಸರ್ಡೊಂಜಿ ದಿನ' ಮತ್ತು `ಆಟಿಡೊಂಜಿ ದಿನ' ಕಾರ್ಯಕ್ರಮವು ತಿರುವೈಲಿನ ದೇವಸದ ಗದ್ದೆಯಲ್ಲಿ ರವಿವಾರ ಜರುಗಿತು.
ಕಾರ್ಯಕ್ರಮವನ್ನು ಊರಿನ ಹಿರಿಯರು ಕಳಸೆಯಲ್ಲಿದ್ದ ತೆಂಗಿನ ಹಿಂಗಾರ ಅರಳಸಿ ಚಾಲನೆ ನೀಡಿದರು. ಇದೇ ವೇಳೆ ಜಾನಕಿ ಮತ್ತು ದೇವಕಿ ಅವರ ತುಳು ಜನಪದ `ಪಾಡ್ದಾನ' ಹಾಡಿ ರಂಜಿಸಿದರು.
ಕೃಷಿಕ ಅಶೋಕ್ ರೈ ಅವರು ಯುವ ಪೀಳಿಗೆಗೆ ಆಟಿ ತಿಂಗಳ ಮಹತ್ವದ ಕುರಿತು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಹಿರಿಯರಾದ ಲಿಂಗಪ್ಪ ಸಾಲ್ಯಾನ್, ಜಯಂತಿ ದೇವಸ, ಜಾನಕಿ ಬೊಂಡಂತಿಲ, ದೇವಕಿ ತಿರುವೈಲು, ಸ್ಥಳೀಯ ಕಾರ್ಪೊರೇಟರ್ ಹೇಮಲತಾ ಆರ್. ಸಾಲ್ಯಾನ್, ದಿವಾಕರ ಆಚಾರ್ಯ ಕುಡುಪು, ಜೈಶಂಕರ್ ಮಾತೃ ಮಂಡಳಿಯ ಅಧ್ಯಕ್ಷೆ ಪುಷ್ಪಾ ಆರ್., ಜೈಶಂಕರ್ ಮಿತ್ರ ಮಂಡಳಿ ಅಧ್ಯಕ್ಷ ಬಾಲಕೃಷ್ಣ, ಮಂಡಳಿಯ ಪದಾಧಿಕಾರಿಗಳು, ಸದಸ್ಯರು, ಊರಿನ ಗಣ್ಯರು ಇದ್ದರು. ಮನೋಜ್ ವಾಮಂಜೂರು ನಿರೂಪಿಸಿದರು.
ಕೆಸರ್ಡೊಂಜಿ ದಿನದ ಅಂಗವಾಗಿ ವಿವಿಧ ವಿಭಾಗಗಲ್ಲಿ ಓಟ, ಗದ್ದೆಯಲ್ಲಿ ನಿಧಿ ಶೋಧ, ಹಗ್ಗ-ಜಗ್ಗಾಟ ಮತ್ತಿತರ ಕೌಶಲ್ಯಭರಿತ ಕ್ರೀಡೆ ಆಯೋಜಿಸಲಾಗಿತ್ತು. ವಿಜೇತರಿಗೆ ಗಣ್ಯರು ಇದೇ ಸಂದರ್ಭ ಬಹುಮಾನ ವಿತರಿಸಿದರು.