×
Ad

ಪಿ.ಎ. ಕಾಲೇಜ್ ವತಿಯಿಂದ "ವಿಶ್ವ ಔಷಧ ತಜ್ಞರ ದಿನ" ಕಾರ್ಯಕ್ರಮ

Update: 2024-09-29 16:51 IST

ಆರೋಗ್ಯ ಕ್ಷೇತ್ರದಲ್ಲಿ ಔಷದ ತಜ್ಞರ ಪಾತ್ರ ಮಹತ್ತರವಾದುದು:

ಕೊಣಾಜೆ: "ಆರೋಗ್ಯ ರಂಗದಲ್ಲಿ ಔಷಧ ತಜ್ಞರ ಪಾತ್ರವು ಅತ್ಯಂತ ಮಹತ್ತರವಾಗಿದ್ದು ಅವರು ಹೊಸ ಸಂಶೋಧನೆ ಮತ್ತು ಆವಿಷ್ಕಾರಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಜನರನ್ನು ಮಾರಕ ರೋಗಗಳಿಂದ ಮುಕ್ತಿಗೊಳಿಸಲು ಅವಿರತ ಪರಿಶ್ರಮ ಪಡುತ್ತಿದ್ದಾರೆ" ಎಂದು‌ ಮಣಿಪಾಲ್ ಕಾಲೇಜ್ ಆಫ್ ಫಾರ್ಮಸ್ಯುಟಿಕಲ್ ಸೈನ್ಸಸ್ ಇದರ ಪ್ರಾಂಶುಪಾಲ ಡಾ. ಶ್ರೀನಿವಾಸ್ ಮುತಾಲಿಕ್ ಹೇಳಿದರು.

ಅವರು ನಡುಪದವಿನ ಪಿ.ಎ. ಕಾಲೇಜ್ ಆಫ್ ಫಾರ್ಮಸಿಯ ವತಿಯಿಂದ "ವಿಶ್ವ ಔಷಧ ತಜ್ಞರ ದಿನ" ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಸಮಾರೋಪ ಭಾಷಣ ಮಾಡಿದ ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್ "ಔಷಧ ತಜ್ಞರು ರೋಗಿಗಳಿಗೆ ಔಷಧಗಳನ್ನು ಬಳಸುವ ವಿಧಾನ, ಅವುಗಳ ತೀವ್ರತೆ ಮತ್ತು ಅಡ್ಡ ಪರಿಣಾಮಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಪ್ರಾಣಾಪಾಯದಿಂದ ಪಾರಾಗಲು ಸಾಧ್ಯ" ಎಂದರು.

ವಿಶ್ವ ಔಷಧ ತಜ್ಞರ ದಿನದ ಅಂಗವಾಗಿ ಏರ್ಪಡಿಸಿದ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ನೀಡಲಾಯಿತು. ಕಾಲೇಜಿನ ನ್ಯೂಸ್ ಬುಲೆಟಿನ್ "ಅಪೊಥೆಕಾ" ವನ್ನು ಬಿಡುಗಡೆಗೊಳಿಸಲಾಯಿತು.

ವಿದ್ಯಾರ್ಥಿಗಳಲ್ಲಿ ಕರ್ತವ್ಯ ಪ್ರಜ್ಞೆ ಮೂಡಿಸಲು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಪ್ರೊ. ಡಾ. ಮುಹಮ್ಮದ್ ಮುಬೀನ್ ಸ್ವಾಗತಿಸಿದರು. ಸಾಹಿಲ್ ಪ್ರಾರ್ಥಿಸಿದರು. ನಜ್ಫತ್ ಕಾರ್ಯಕ್ರಮ ನಿರೂಪಿಸಿದರು. ಡಾ. ರಜಿಶಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News