ಅಂಬೇಡ್ಕರ್, ದಲಿತರ ನಿಂದನೆ ವಿರುದ್ಧ ದೂರು
ಮಂಗಳೂರು: ಕರಾವಳಿ ಮಾರಾಠಿ ಸಮಾವೇಶ ಕಾರ್ಯಕ್ರಮಕ್ಕೆ ಸಂಬಂಧಿಸಿ ಉಮೇಶ್ ನಾಯ್ಕ ಎಂಬವರು ತಾನೊಬ್ಬ ಎಸ್ಟಿ ಎಂಬ ಪರಿಜ್ಞಾನವಿಲ್ಲದೆ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಮತ್ತು ದಲಿತ ಸಮುದಾಯವನ್ನು ನಿಂದಿಸಿ, ತನ್ನ ಧ್ವನಿಸುರುಳಿಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಜಾಲತಾಣದ ಗುಂಪುಗಳಿಗೂ ರವಾನಿಸುವಂತೆ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ದಲಿತ ಹಕ್ಕುಗಳ ಸಮಿತಿಯ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೃಷ್ಣ ತಣ್ಣೀರು ಬಾವಿ ನೇತೃತ್ವದ ನಿಯೋಗವು ಬುಧವಾರ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ನೀಡಿದೆ.
ಉಮೇಶ್ ನಾಯ್ಕರ ಹೇಳಿಕೆಯನ್ನು ಖಂಡಿಸಿರುವ ದಲಿತ ಹಕ್ಕುಗಳ ಸಮಿತಿಯು ಅವರ ವಿರುದ್ಧ ಕ್ರಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರನ್ನು ಆಗ್ರಹಿಸಿದೆ.
ನಿಯೋಗದಲ್ಲಿ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾಧ್ಯಕ್ಷ ಕೃಷ್ಣಪ್ಪ ಕೊಣಾಜೆ, ಚಂದ್ರಶೇಖರ ಕಿನ್ಯಾ, ರಾಧಕೃಷ್ಣ ಬೊಂಡಂತಿಲ, ಉಮೇಶ್ ಮೂಡಬಿದಿರೆ, ವಿಶ್ವನಾಥ ಮಂಜನಾಡಿ ಮತ್ತು ಸ್ವಸ್ತಿಕ್ ಕಿನ್ಯಾ ಭಾಗವಹಿಸಿದ್ದರು.