ಲೂರ್ಡ್ಸ್ ಸೆಂಟ್ರಲ್ ಸ್ಕೂಲ್: ಅಂತರ್ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ
Update: 2024-10-16 20:41 IST
ಮಂಗಳೂರು: ಲೂರ್ಡ್ಸ್ ಸೆಂಟ್ರಲ್ ಶಾಲೆಯಲ್ಲಿ ಅಂತರ್‌ರಾಷ್ಟ್ರೀಯ ಹೆಣ್ಣು ಮಕ್ಕಳ ದಿನವನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಹೆಣ್ಣು ಮಕ್ಕಳನ್ನು ಉತ್ತೇಜಿಸುವಂತಹ ಹಾಡನ್ನು ಹಾಡಲಾಯಿತು. ಆರನೇ ತರಗತಿ ಮಕ್ಕಳು ಒಂದು ಅರ್ಥಪೂರ್ಣವಾದ ಕಿರುನಾಟಕವನ್ನು ಪ್ರದರ್ಶಿಸಿ ಅದರಲ್ಲಿ ಭಾರತದ ಪ್ರಸಿದ್ಧ ಮಹಿಳೆಯರಾದ ಸುಧಾ ಮೂರ್ತಿ, ಕಿರಣ್ ಬೇಡಿ, ಮೇರಿಕಾಮ್, ಶಕ್ತಿ ಮೋಹನ್ ಮುಂತಾದ ಮಹಿಳೆಯರು ಮಿಂಚಿರುವ ಕ್ಷೇತ್ರಗಳ ಬಗ್ಗೆ ಬೆಳಕು ಚೆಲ್ಲಿದರು.
ಶಾಲಾ ಪ್ರಾಂಶುಪಾಲ ಫಾ ಜಾನ್ಸನ್ ಸಿಕ್ವೇರಾ ಮಾತಣಾಡಿ ಹೆಣ್ಣು ಮಕ್ಕಳು ಎಲ್ಲಾ ರಂಗಗಳಲ್ಲೂ ಬಹಳ ಪ್ರಸಿದ್ಧಿಯನ್ನು ಪಡೆದಿದ್ದಾರೆ ಎಂದು ಹೇಳಿದರು.
ಇದರ ಅಂಗವಾಗಿ ನಡೆದ ಶಾಲಾ ಸಭೆಯನ್ನು 11ನೇ ತರಗತಿ ವಿದ್ಯಾರ್ಥಿನಿಯರು ಶಿಕ್ಷಕಿ ನೀಮಾ ಲೋಬೊ ಮಾರ್ಗದರ್ಶನದಲ್ಲಿ ನಡೆಸಿ ಕೊಟ್ಟರು.