ಮಂಗಳೂರು: ಕಟ್ಟಡ ಕಾರ್ಮಿಕರಿಂದ ಪ್ರತಿಭಟನೆ
ಮಂಗಳೂರು: ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್‌ನ ದ.ಕ. ಜಿಲ್ಲಾ ಸಮಿತಿಯ ನೇತೃತ್ವದಲ್ಲಿ ರಾಜ್ಯವ್ಯಾಪಿ ಹೋರಾಟದ ಭಾಗವಾಗಿ ಕಟ್ಟಡ ಕಾರ್ಮಿಕರ ಅಖಿಲ ಭಾರತ ಮತ್ತು ರಾಜ್ಯಮಟ್ಟದ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ನಗರದ ಮಿನಿ ವಿಧಾನಸೌಧದ ಮುಂದೆ ಬುಧವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ಘಾಟಿಸಿ ಮಾತನಾಡಿದ ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯೋಗೀಶ್ ಜಪ್ಪಿನಮೊಗರು ಕಟ್ಟಡ ಕಾರ್ಮಿಕರಿಗೆ ಎರಡು ತಿಂಗಳಿನಿಂದ ಬಿಡುಗಡೆಯಾಗದ ಮಾಸಿಕ ಪಿಂಚಣಿ ಹಣವನ್ನು ಕೂಡಲೇ ಬಿಡುಗಡೆಗೊಳಿಸಬೇಕು. 2022 ರಿಂದ ಬಾಕಿ ಉಳಿಸಿಕೊಂಡಿರುವ ಶೈಕ್ಷಣಿಕ ಧನ ಸಹಾಯವನ್ನು ಹೈಕೋರ್ಟ್ ಆದೇಶದಂತೆ ಕೂಡಲೇ ನೀಡಬೇಕು. ನೋಂದಣಿ ನವೀಕರಣ ಸಮಸ್ಯೆಗಳನ್ನು ಇತ್ಯಾರ್ಥಪಡಿಸಲು ಕಲ್ಯಾಣ ಮಂಡಳಿ ಹಾಗೂ ರಾಜ್ಯ ಸರಕಾರ ಮಧ್ಯ ಪ್ರವೇಶಿಸಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರಕಾರಗಳನ್ನು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್, ಕಟ್ಟಡ ಕಾರ್ಮಿಕರ ಜಿಲ್ಲಾ ಮುಖಂಡರಾದ ರವಿಚಂದ್ರ ಕೊಂಚಾಡಿ, ಯು. ಜಯಂತ್ ನಾಯಕ್, ಚಂದ್ರಹಾಸ ಪಿಲಾರು ಮಾತನಾಡಿದರು.
ಪ್ರತಿಭಟನೆಯ ನೇತೃತ್ವವನ್ನು ದಿನೇಶ್ ಜಪ್ಪಿನಮೊಗರು, ಪಾಂಡುರಂಗ ಕೊಂಚಾಡಿ, ಜನಾರ್ದನ ಕುತ್ತಾರು, ವಸಂತಿ ಕುಪ್ಪೆಪದವು, ಯಶೋದಾ ಮಳಲಿ, ಜಯಶೀಲಾ ವಾಮಂಜೂರು ವಹಿಸಿದ್ದರು.
ಪ್ರತಿಭಟನೆಯಲ್ಲಿ ರಾಮಚಂದ್ರ ಪಜೀರು, ರೋಹಿದಾಸ್ ಭಟ್ನಗರ, ಇಬ್ರಾಹಿಂ ಮದಕ, ಪ್ರವೀಣ್ ವಾಮಜೂರು, ಅಶೋಕ್ ಶ್ರೀಯಾನ್, ಅಶೋಕ್ ಸಾಲಿಯಾನ್, ಉಮೇಶ್ ಶಕ್ತಿನಗರ, ಶಶಿಧರ ಶಕ್ತಿನಗರ, ಮೋಹನ್ ಜಲ್ಲಿಗುಡ್ಡೆ, ರಿಚರ್ಡ್ ಕ್ರಾಸ್ತ, ಸುಧಾಕರ್ ಆಳ್ವಾ ತೊಕ್ಕೊಟ್ಟು ಪಾಲ್ಗೊಂಡಿದ್ದರು.