×
Ad

ಸುಳ್ಯ: ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ದಿವಾಕರ ಮುಂಡಾಜೆ ನಿಧನ

Update: 2024-10-16 21:40 IST

ಸುಳ್ಯ: ವಲಯ ಫೋಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ, ಹರಿಹರ ಪಲ್ಲತ್ತಡ್ಕ ಗ್ರಾ.ಪಂ. ಸದಸ್ಯ, ದಿವಾಕರ ಮುಂಡಾಜೆ (55) ಅವರು ಹೃದಯಾಘಾತದಿಂದ ಬುಧವಾರ ಬೆಳಗ್ಗೆ ನಿಧನ ಹೊಂದಿದರು.

ಮೃತರಿಗೆ ತಂದೆ, ತಾಯಿ, ಪತ್ನಿ, ಇಬ್ಬರು ಪುತ್ರಿಯರು ಇದ್ದಾರೆ.

ದಿವಾಕರ್ ಅವರು ಬುಧವಾರ ಬೆಳಿಗ್ಗೆ ತನ್ನ ಅಂಗಡಿಗೆ ತನ್ನ ಕಾರಲ್ಲಿ ಬರುತ್ತಿದ್ದ ವೇಳೆ ದಾರಿ ಮಧ್ಯೆ ಹೃದಯಾಘಾತದಿಂದ ಮೃತರಾಗಿದ್ದಾರೆ. ದಿವಾಕರ್ ಅವರು ಹರಿಹರದಲ್ಲಿ ಸ್ಟುಡಿಯೋ, ಅಂಗಡಿಯನ್ನು ಹೊಂದಿದ್ದು, ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸೇರಿದಂತೆ ಸಂಘ-ಸಂಸ್ಥೆಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ತನ್ನ ಕಾಲೇಜು ಜೀವನದಲ್ಲಿ ನಾಟಕಗಳಲ್ಲೂ ಪಾತ್ರ ನಿರ್ವಹಿಸಿದ್ದರು. ಮೃತರ ಮನೆಗೆ ಹಲವರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.

ದಿವಾಕರ ಮುಂಡಾಜೆ ಅವರ ನಿಧನದ ಹಿನ್ನಲೆಯಲ್ಲಿ ಸುಳ್ಯ ತಾಲೂಕಿನಾದ್ಯಂತ ಹಾಗೂ ಕಡಬ ತಾಲೂಕಿನ ಹಲವೆಡೆ ಸ್ಟುಡಿಯೋಗಳನ್ನು ಬಂದ್ ಮಾಡಲಾಗಿತ್ತು. ಹರಿಹರ ಪಲ್ಲತ್ತಡ್ಕ ಪೇಟೆಯಲ್ಲಿ ವರ್ತಕರು ಒಂದು ಗಂಟೆ ಕಾಲ ಅಂಗಡಿ ಗಳನ್ನು ಬಂದ್ ಮಾಡಿ, ಟ್ಯಾಕ್ಸಿ, ಅಟೋ, ಜೀಪ್ ಚಾಲಕರು ಸೇವೆ ಸ್ಥಗಿತಗೊಳಿಸಿ ಮೃತರಿಗೆ ಸಂತಾಪ ಸೂಚಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News