×
Ad

ವ್ಯಕ್ತಿ ನಾಪತ್ತೆ

Update: 2024-11-25 20:56 IST

ಮಂಗಳೂರು: ಕಟ್ಟಡವೊಂದರ ಸೆಕ್ಯುರಿಟಿಯಾಗಿ ಕೆಲಸ ಮಾಡಿಕೊಂಡಿದ್ದ ವಿಶ್ವನಾಥ ಪೂಜಾರಿ ಯಾನೆ ಹೊನ್ನಯ್ಯ(55) ನಾಪತ್ತೆಯಾಗಿದ್ದಾರೆ.

ಸುಮಾರು 25 ವರ್ಷದಿಂದ ವಿಶ್ವನಾಥ ಪೂಜಾರಿ ಸೆಕ್ಯುರಿಟಿ ಕೆಲಸ ಮಾಡಿಕೊಂಡಿದ್ದರು. ಸಾಮಾನ್ಯವಾಗಿ ರಾತ್ರಿ 8ಕ್ಕೆ ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದರು. ಆದರೆ ನ.21ರಂದು ಮನೆಗೆ ವಾಪಸ್ ಬಂದಿರಲಿಲ್ಲ. ಮನೆಯವರು ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಕೆಲಸ ಮಾಡುವಲ್ಲಿ ಹೋಗಿ ವಿಚಾರಿಸಿದಾಗ ಅಲ್ಲಿಯೂ ಇರಲಿಲ್ಲ. ಬಳಿಕ ನ.22ರಂದು ಸೆಕ್ಯುರಿಟಿ ಕೆಲಸ ಮಾಡುವಲ್ಲಿ ಬಂದು ಅಲ್ಲಿನ ಕೆಲಸಗಾರರ ಜತೆ ಮಾತನಾಡಿ ಹೋಗಿರುವ ಮಾಹಿತಿ ಸಿಕ್ಕಿದೆ. ಆದರೆ ಅನಂತರ ಎಲ್ಲಿಯೂ ಪತ್ತೆಯಾಗಿಲ್ಲ ಎಂದು ವಿಶ್ವನಾಥ ಪೂಜಾರಿಯ ಪುತ್ರಿ ಬಂದರು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News