×
Ad

ಮಂಗಳೂರು| ಗಾಂಜಾ ಸಹಿತ ಇಬ್ಬರ ಸೆರೆ

Update: 2024-11-28 21:47 IST

ಮಂಗಳೂರು, ನ.28: ಕಾವೂರು ಮತ್ತು ಕಂಕನಾಡಿ ನಗರ ಠಾಣಾ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಮಾಡಿದ ಆರೋಪರ ಮೇರೆಗೆ ಎರಡು ಪ್ರತ್ಯೇಕ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಲಾಗಿದೆ.

ಕುಂಟಿಕಾನದಲ್ಲಿ ಸಿಗರೇಟಿನಲ್ಲಿ ಗಾಂಜಾ ತುಂಬಿಸಿ ಸೇವನೆ ಮಾಡುತ್ತಿದ್ದ ಆವೆಲೆನ್ಸಿಯಾ ಸೂಟರ್‌ಪೇಟೆ ನಿವಾಸಿ ಸುಹೈಬ್ (19) ಎಂಬಾತನನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ.

ಎಕ್ಕೂರು ಮೈದಾನ ಬಳಿ ಮಂಗಳವಾರ ರಾತ್ರಿ 11:45ರ ವೇಳೆಗೆ ಗಾಂಜಾ ಸೇವನೆ ಮಾಡುತ್ತಿದ್ದ ಅದ್ನಾನ್ (20) ಎಂಬಾತನನ್ನು ಕಂಕನಾಡಿ ನಗರ ಪೊಲೀಸರು ಬಂಧಿಸಿದ್ದಾರೆ.

ಇಬ್ಬರ ವಿರುದ್ಧವೂ ಎನ್‌ಡಿಪಿಎಸ್ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News