×
Ad

ಮುಸ್ಲಿಂ ಲೀಗ್ ಮುಖಂಡ ಕರೀಂ ಕಡಬ ನಿಧನ

Update: 2024-12-26 20:48 IST

ಮಂಗಳೂರು: ಕರ್ನಾಟಕ ರಾಜ್ಯ ಮುಸ್ಲಿಂ ಲೀಗ್ ಮಾಜಿ ಕಾರ್ಯದರ್ಶಿ, ದ.ಕ.ಜಿಲ್ಲಾ ಮಾಜಿ ಅಧ್ಯಕ್ಷ ಎ.ಎಸ್.ಇ ಕರೀಮ್ ಕಡಬ (64)ಗುರುವಾರ ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಮತ್ತು ಅಪಾರ ಬಳಗವನ್ನು ಮೃತರು ಅಗಲಿದ್ದಾರೆ.

ಕರ್ನಾಟಕ ರಾಜ್ಯ ಎಂಎಸ್‌ಎಫ್ ಹಾಗೂ ಮುಸ್ಲಿಂ ಯೂತ್ ಲೀಗ್‌ನ ಪ್ರಮು ಸ್ಥಾನಗಳ ಜವಾಬ್ದಾರಿ ವಹಿಸಿದ್ದ ಇವರು ಲೈಫ್ ಪಬ್ಲಿಶಿಂಗ್ ಟ್ರಸ್ಟ್ ಮಂಗಳೂರು, ಬಾಫಖಿ ತಂಳ್ ಫೌಂಡೇಶನ್ ಕರ್ನಾಟಕದ ಸ್ಥಾಪಕರಾಗಿದ್ದರು.

*ಮುಸ್ಲಿಂ ಲೀಗ್ ಅಧ್ಯಕ್ಷ ಪಾಣಕ್ಕಾಡ್ ಸಯ್ಯಿದ್ ಸ್ವಾದಿಖಲಿ ಶಿಹಾಬ್ ತಂಳ್, ಮುಸ್ಲಿಂ ಯೂತ್ ಲೀಗ್ ಕೇರಳ ರಾಜ್ಯಾಧ್ಯಕ್ಷ ಪಾಣಕ್ಕಾಡ್ ಸಯ್ಯಿದ್ ಮುನವ್ವರಲಿ ಶಿಹಾಬ್ ತಂಙಳ್, ಸಂಸದರಾದ ಇ.ಟಿ. ಮುಹಮ್ಮದ್ ಬಶೀರ್, ಅಬ್ದುಸ್ಸಮದ್ ಸಮದಾನಿ, ನವಾಝ್ ಗನಿ, ರಾಜ್ಯಸಭಾ ಸದಸ್ಯ ನ್ಯಾಯವಾದಿ ಹಾರಿಸ್ ಬೀರಾನ್, ಕರ್ನಾಟಕ ರಾಜ್ಯಾಧ್ಯಕ್ಷ ಜಾವೇದುಲ್ಲಾ, ಪ್ರಧಾನ ಕಾರ್ಯದರ್ಶಿ ಮೌಲಾನಾ ನೂಹ್ ಗುಲ್ಬರ್ಗ, ಕರ್ನಾಟಕ ರಾಜ್ಯ ಉಸ್ತುವಾರಿ ಟಿ.ಪಿ ಅಶ್ರಫಲಿ, ಎಂಎಸ್‌ಎಫ್ ರಾಷ್ಟ್ರೀಯ ಅಧ್ಯಕ್ಷ ಪಿ.ವಿ. ಸಾಜು ಅಹ್ಮದ್ ದೆಹಲಿ, ಶಾಸಕರಾದ ಎನ್.ಎ ನೆಲ್ಲಿಕುನ್ನು, ಎ.ಕೆ.ಎಂ ಅಶ್ರಫ್, ಬಾಫಖಿ ತಂಳ್ ಫೌಂಡೇಶನ್ ಕರ್ನಾಟಕ ಅಧ್ಯಕ್ಷ ಡಾ.ಶೇಖ್ ಬಾವ ಹಾಜಿ ಮಂಗಳೂರು, ಮುಸ್ಲಿಂ ಲೀಗ್ ದ.ಕ. ಜಿಲ್ಲಾಧ್ಯಕ್ಷ ಸಿ. ಅಬ್ದುರ‌್ರಹ್ಮಾನ್ ಮಂಗಳೂರು, ಪ್ರಧಾನ ಕಾರ್ಯದರ್ಶಿ ನೌಶಾದ್ ಮಲಾರ್, ಕೋಶಾಧಿಕಾರಿ ರಿಯಾಝ್ ಹರೇಕಳ, ಅಡ್ವಕೇಟ್ ಎಸ್. ಸುಲೈಮಾನ್ ಮಂಗಳೂರು, ಇಬ್ರಾಹಿಂ ಹಾಜಿ ಬೆಂಗರೆ, ಎಚ್.ಇಸ್ಮಾಯಿಲ್, ಮುಸ್ಲಿಂ ಲೀಗ್ ದ.ಕ. ಜಿಲ್ಲಾ ಮಾಜಿ ಅಧ್ಯಕ್ಷ ಫಯಾಝ್ ಜೆಪ್ಪು, ಸಿದ್ಧೀಕ್ ಅಬ್ದುಲ್ ಖಾದರ್ ಬಂಟ್ವಾಳ, ಅಬ್ದುರ‌್ರಹ್ಮಾನ್ ದಾರಿಮಿ ತಬೂಕ್, ಮಾಜಿ ಕಾರ್ಯದರ್ಶಿ ಇಸ್ಮಾಯಿಲ್ ಬಿ.ಸಿ. ರೋಡ್, ಮುಸ್ಲಿಂ ಯೂತ್ ಲೀಗ್ ಜಿಲ್ಲಾಧ್ಯಕ್ಷ ಹನೀಫ್ ಕುಂಜತ್ತೂರು, ಶಬೀರ್ ತಲಪಾಡಿ, ನಿಸಾರ್ ಬೆಂಗರೆ, ಸಿದ್ದೀಕ್, ಕೆಎಸ್‌ಎಚ್ ಹಾಜಿ ಹಮೀದ್ ಕೊರಂದೂರು, ಮುಸ್ತಫಾ ಅಲಿ ಬೆಂಗಳೂರು, ಸಯ್ಯಿದ್ ಸಿದ್ದೀಕ್ ತಂಳ್ ಬೆಂಗಳೂರು, ಮುಸ್ಲಿಂ ಯೂತ್ ಲೀಗ್ ರಾಷ್ಟ್ರೀಯ ಉಪಾಧ್ಯಕ್ಷ ಸಿರಾಜುದ್ಧೀನ್ ನದ್ವಿ ಉತ್ತರ ಪ್ರದೇಶ, ಮುಸ್ಲಿಂ ಲೀಗ್ ಜಿಲ್ಲಾ ಉಪಾಧ್ಯಕ್ಷರಾದ ಸಯ್ಯಿದ್ ಬಂಗೇರುಕಟ್ಟೆ, ಎಂ.ಎಸ್ ಸಿದ್ದೀಕ್ ಫರಂಗಿಪೇಟೆ, ಎಂ.ಎಸ್.ಎಫ್ ದ.ಕ. ಜಿಲ್ಲಾಧ್ಯಕ್ಷ ಝುಲ್ಛಿಕರ್ ಅಲಿ ಎಚ್.ಕಲ್ಲು, ಕಾರ್ಯದರ್ಶಿ ಅನಸ್ ಗೂಡಿನಬಳಿ, ಕೋಶಾಧಿಕಾರಿ ಇರ್ಶಾನ್ ಸವಣೂರು, ಲತೀಫ್ ಕುಂಡಾಲ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News