×
Ad

ಪಂಜಿಮೊಗರು: ಸುಕೂನ್ ಯೋಜನೆಯಡಿ ಮನೆ ಹಸ್ತಾಂತರ

Update: 2024-12-29 21:06 IST

ಮಂಗಳೂರು: ಪಂಜಿಮೊಗರಿನ ಇಹ್ಸಾನ್ ವೆಲ್ಫೆಲ್ ಟ್ರಸ್ಟ್‌ನ ಇದರ ಸುಕೂನ್ ಯೋಜನೆಯಡಿಯಲ್ಲಿ ನಿರ್ಮಿಸಿದ ಬಡ ಕುಟುಂಬಕ್ಕೆ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಕೂಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಮುದರ್ರಿಸ್ ಸಾಬಿತ್ ಸಖಾಫಿ ತಂಳ್ ನೂತನ ಮನೆಯನ್ನು ಹಸ್ತಾಂತರಿಸಿದರು.

ಮುಖ್ಯ ಅತಿಥಿಯಾಗಿ ಮಂಗಳೂರು ನಗರ ಪಾಲಿಕೆಯ ವಿಪಕ್ಷ ನಾಯಕ ಅನಿಲ್ ಕುಮಾರ್, ಕಾವೂರು ಠಾಣೆಯ ಪೊಲೀಸ್ ನಿರೀಕ್ಷಕ ರಾಘವೇಂದ್ರ ಎಂ. ಬೈಂದೂರ್‌ು ಭಾಗವಹಿಸಿ ಶುಭ ಹಾರೈಸಿದರು.

ಇಹ್ಸಾನ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ನಿಸಾರ್ ಕೆ.ಎಂ. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ತೈಬಾ ಅಕಾಡಮಿಯ ಮ್ಯಾನೇಜರ್ ಬಶೀರ್ ಮದನಿ ಅಲ್-ಕಾಮಿಲ್, ಕೂಳೂರು ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಕೆ.ಅಬ್ಬಾಸ್ ಹಾಜಿ, ಕೆಪಿಸಿಸಿ ಕಾರ್ಯದರ್ಶಿ ಇನಾಯತ್ ಅಲಿ, ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ರಿಯಾಝ್ ಕಡಂಬು, ಸಿಪಿಎಂ ಮುಖಂಡ ದಯಾನಂದ ಶೆಟ್ಟಿ, ಕೂಳೂರು ಕಾವೂರು ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹುಸೈನ್ ರಿಯಾಝ್, ಅಲ್-ಫಾರೂಕ್ ಜುಮಾ ಮಸೀದಿಯ ಅಧ್ಯಕ್ಷ ನೌಷಾದ್ ಅಲಿ, ಇಹ್ಸಾನ್ ವೆಲ್ಫೇರ್ ಟ್ರಸ್ಟ್ ಉಪಾಧ್ಯಕ್ಷ ಅಫ್ರಿದ್ ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಜುನೈದ್ ಸ್ವಾಗತಿಸಿದರು. ಕಾರ್ಯದರ್ಶಿ ಶಾರೀಕ್ ವಂದಿಸಿದರು. ಸದಸ್ಯ ಶಕೀಲ್ ಕೂಳೂರು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News