ಜನ ಸಾಮಾನ್ಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಆಗಲಿ-ಕೃಷ್ಣ ಜೆ ಪಾಲೆಮಾರ್
ಮಂಗಳೂರು; ಸಂಘಟನೆಗಳ ಮೂಲಕ ಜನ ಸಾಮಾನ್ಯರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವ ಕೆಲಸ ಆಗಲಿ ಎಂದು ಮಾಜಿ ಸಚಿವ ಕೃಷ್ಣ ಜೆ ಪಾಲೆಮಾರ್ ತಿಳಿಸಿದ್ದಾರೆ.
ಅವರು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ವಾರ್ಷಿಕ ಮಹೋತ್ಸವದ ಸಂದರ್ಭದಲ್ಲಿ ಕದ್ರಿ ಹಿಲ್ಸ್ ಆಕಾಶವಾಣಿ ಬಳಿಯ ಸಂಪಿಗೆ ಕಟ್ಟೆ ಶ್ರೀ ಮಂಜುನಾಥ ಫ್ರೆಂಡ್ಸ್ ಸರ್ಕಲ್ ನ 24 ನೇ ವಾರ್ಷಿಕೋತ್ಸ ವವನ್ನು ಉದ್ಘಾಟಿಸಿ ಮಾತ ನಾಡುತ್ತಿದ್ದರು.
ಮಂಜುನಾಥ ಫ್ರೆಂಡ್ಸ್ ಸರ್ಕಲ್ ಕಳೆದ 24 ವರ್ಷಗಳಿಂದ ಯಾವುದೇ ಫಲಾಪೇಕ್ಷೆ ಇಲ್ಲದೆ ಜನರಲ್ಲಿ ಸಾಮಾಜಿಕ ಮತ್ತು ಧಾರ್ಮಿಕ ಪ್ರಜ್ಞೆ ಮೂಡಿಸುವ ಕೆಲಸ ಮಾಡುತ್ತಿದೆ. ಇದರ ಕಾರ್ಯವೈಖರಿ ಎಲ್ಲಾ ಸಂಘಟನೆಗಳಿಗೆ ಮಾದರಿಯಾಗಿದೆ ಎಂದು ಹಾರೈಸಿದರು.
ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಅಮ್ಮ ಕಲಾವಿದೆರ್ ಕುಡ್ಲ ವತಿಯಿಂದ 'ಅಮ್ಮೆರ್' ಎಂಬ ತುಳು ಹಾಸ್ಯ ನಾಟಕ ಪ್ರದರ್ಶನ ನಡೆಯಿತು .ಶಾಸಕ ವೇದವ್ಯಾಸ ಕಾಮತ್, ಸ್ಥಳೀಯ ಕಾರ್ಪೊರೇಟರ್ ಶಕೀಲಾ ಕಾವ, ಡಿಂಕಿ ಡೈನ್ ಮಾಲಕ ಸ್ವರ್ಣ ಸುಂದರ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಶೆಟ್ಟಿ, ಸೂರಜ್ ಕುಮಾರ್ ಕಲ್ಯ ಅವರು ಅತಿಥಿಗಳಾಗಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುಂದರ ರೈ ಮಂದಾರ ಮತ್ತು ಮಂಗಳೂರು ಮೀನಾನಾಥ ಖ್ಯಾತಿಯ ರಾಘವೇಂದ್ರ ರೈ ಅವರನ್ನು ಸನ್ಮಾನಿಸಲಾಯಿತು. ಮಂಜುನಾಥ್ ಫ್ರೆಂಡ್ ಸರ್ಕಲ್ ನ ಅಧ್ಯಕ್ಷ ಶ್ರೀಧರ ಸಾಲ್ಯಾನ್ ಮತ್ತು ಸದಸ್ಯರು ಉಪಸ್ಥಿತರಿದ್ದರು.
ಶಕೀಲಾ ಕಾವ ಅವರು ಮಾತನಾಡಿ ಮಂಜುನಾಥ ಫ್ರೆಂಡ್ಸ್ ಸರ್ಕಲ್ ಕಳೆದ 24 ವರ್ಷಗಳಿಂದ ಸಲ್ಲಿಸಿರುವ ಸೇವೆ ಅಸಾಧಾರಣ ಎಂದು ಅಭಿನಂದಿಸಿ ಶುಭ ಕೋರಿದರು.