×
Ad

ದೇರಳಕಟ್ಟೆ: ಸಾರ್ವಜನಿಕ ಕುರ್ ಆನ್ ಸಂದೇಶ ಕಾರ್ಯಕ್ರಮ

Update: 2025-01-25 13:20 IST

ಉಳ್ಳಾಲ: ಎಲ್ಲಾ ಧರ್ಮಗಳಲ್ಲಿ ಧರ್ಮ ಗ್ರಂಥಗಳು ಇವೆ. ಅವುಗಳನ್ನು ತಾಳ್ಮೆ, ಸಹನೆಯಿಂದ ಅಧ್ಯಯನ ಮಾಡಿ ಅರಿತುಕೊಳ್ಳಬೇಕು ಎಂದು ನಿವೃತ್ತ ಶಿಕ್ಷಕ ರವೀಂದ್ರ ರೈ ಹರೇಕಳ ಹೇಳಿದ್ದಾರೆ.

ಅವರು ಜಮಾಅತೆ ಇಸ್ಲಾಮಿ ಹಿಂದ್ ಉಳ್ಳಾಲ ಇದರ ಆಶ್ರಯದಲ್ಲಿ 'ಕನ್ನಡದಲ್ಲಿ ಕುರ್ ಆನ್ ಸಂದೇಶ' ಎಂಬ ಶೀರ್ಷಿಕೆಯಡಿಯಲ್ಲಿ ದೇರಳಕಟ್ಟೆ ಸಿಟಿ ಗ್ರೌಂಡ್ ನಲ್ಲಿ ಶುಕ್ರವಾರ ನಡೆದ ಸಾರ್ವಜನಿಕ ಕುರ್ ಆನ್ ಸಂದೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು

ಕನ್ನಡದಲ್ಲಿ ಕುರ್ಆನ್ ಸಂದೇಶವನ್ನು ನೀಡಿದ ಮಸ್ಜಿದುಲ್ ಹುದಾ ಖತೀಬ್ ಮುಹಮ್ಮದ್ ಕುಂಞಿ, ಧರ್ಮ ಗ್ರಂಥಗಳಲ್ಲಿರುವ ಉತ್ತಮ ಸಂದೇಶಗಳನ್ನು ಪಾಲನೆ ಮಾಡಿದರೆ ಗೊಂದಲ ಸೃಷ್ಟಿ ಆಗದು ಎಂದರು.

ಕಾರ್ಯಕ್ರಮದಲ್ಲಿ ಅಖಿಲ ಭಾರತ ಕ್ರೈಸ್ತ ಒಕ್ಕೂಟದ ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ, ಸದ್ಭಾವನಾ ವೇದಿಕೆ ಅಧ್ಯಕ್ಷ ಪ್ರಸಾದ್ ರೈ ಕಲಿಮಾರ್, ಅಸೈ ಜುಮಾ ಮಸೀದಿ ಅಧ್ಯಕ್ಷ ಪಿ.ಎಂ.ಅಬ್ಬಾಸ್ ಹಾಜಿ, ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಂ, ಸದಸ್ಯ ಅಬ್ದುಲ್ ರಹೀಂ , ದೇರಳಕಟ್ಟೆ ಉಮರ್ ಬಿನ್ ಖತ್ತಾಬ್ ಮಸೀದಿಯ ಅಧ್ಯಕ್ಷ ಮುಹಮ್ಮದ್ ಯಾಸೀನ್ ಡಿ. ಮತ್ತಿತರರು ಭಾಗವಹಿಸಿದ್ದರು.

ಡಾ.ಮುಹಮ್ಮದ್ ಮುಬೀನ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಜಮಾಅತೆ ಇಸ್ಲಾಮಿ ಸಂಚಾಲಕ ಇಸ್ಹಾಕ್ ಹಸನ್, ನಿಝಾಮುದ್ದೀನ್, ಮುಝಮ್ಮಿಲ್ ಅಹ್ಮದ್ ಕಾರ್ಯಕ್ರಮ ನಿರೂಪಿಸಿದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News