ರಾಜ್ಯದಲ್ಲಿ ಆಂಗ್ಲ ಮಾಧ್ಯಮ ಶಾಲೆ ವಿಸ್ತರಣೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ
ಉಳ್ಳಾಲ : ಈ ಶಾಲೆಗೆ ಜಾಗ ದೇಣಿಗೆ ಯಾಗಿ ಹಿರಿಯರು ಉದಾರ ಮನಸ್ಸಿನಿಂದ ನೀಡಿದ ಕಾರಣ ಅಂಬ್ಲಮೊಗರು ನಲ್ಲಿ ಶಿಕ್ಷಣ ಸಂಸ್ಥೆಗಳು ಬೆಳೆದಿದೆ.ಇಲ್ಲಿ ಶಿಕ್ಷಣ ಅಭಿವೃದ್ಧಿ ಕಾಣಬೇಕು.ಪ್ರಸಕ್ತ ರಾಜ್ಯದಲ್ಲಿ 76000 ಶಾಲೆಗಳ ಭವಿಷ್ಯ ರೂಪಿಸುವ ಕೆಲಸ ಸರ್ಕಾರ ಮಾಡುತ್ತಿದೆ. ಈಗಾಗಲೇ ಕನ್ನಡ ಮಾಧ್ಯಮ ಶಿಕ್ಷಣ ಜೊತೆಗೆ 2000 ಆಂಗ್ಲ ಮಾಧ್ಯಮ ಶಾಲೆ ಇದ್ದು, ಇದನ್ನು ಮುಂದಿನ ವರ್ಷ ಮೂರು ಸಾವಿರಕ್ಕೆ ಏರಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು
ಅವರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಂಬ್ಲಮೊಗರು ಇದರ ಶತಮಾನೋತ್ಸವ ಸಂಭ್ರಮ ಹಾಗೂ ಶತಮಾನೋತ್ಸವ ಸ್ಮಾರಕ ಭವನ ಶಿಲಾನ್ಯಾಸ ಸಮಾರಂಭದಲ್ಲಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.
ರಾಜ್ಯ ದಲ್ಲಿ 50,000 ಶಿಕ್ಷಕರ ಕೊರತೆಯಿದ್ದು, ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 4,600 ಶಿಕ್ಷಕರ ನೇಮಕಾತಿ ಮಾತ್ರ ಆಗಿತ್ತು. ಈ ಬಾರಿ ಕಾಂಗ್ರೆಸ್ ಸರ್ಕಾರ13,500 ಶಿಕ್ಷಕರ ನೇಮಕಾತಿ ಮಾಡುವ ಮೂಲಕ ಮಹತ್ತರ ಕೆಲಸ ಮಾಡಿದೆ. ಶಿಕ್ಷಕರು ಕೊರತೆ ಇರುವ ಶಾಲೆಗಳಿಗೆ ಅತಿಥಿ ಉಪನ್ಯಾಸಕರ ವ್ಯವಸ್ಥೆ ಮಾಡಲಾಗಿದೆ ಎಂದರು.
ಆಧುನಿಕ ಕಾಲದಲ್ಲಿ ಶಾಲೆಗಳಲ್ಲಿ ವ್ಯವಸ್ಥೆ ಕೊರತೆ ಇದೆ. ಈ ಕಾರಣದಿಂದ ಮಕ್ಕಳು ಶಾಲೆಗೆ ಬರಲು ಹಿಂಜರಿಯುತ್ತಾರೆ. ಪೂರ್ಣ ವ್ಯವಸ್ಥೆ ಜೊತೆಗೆ ಆಂಗ್ಲ ಮಾಧ್ಯಮ ಶಾಲೆ ವಿಸ್ತರಣೆ ಮಾಡಲು ಸರ್ಕಾರ ಚಿಂತನೆ ನಡೆಸಿದೆ ಎಂದರು.
ವಿದ್ಯಾರ್ಥಿಗಳು ಶಿಕ್ಷಣದಿಂದ ಹಿಂದುಳಿಯಬಾರದು ಎಂಬ ಕಾರಣದಿಂದ ಮಧ್ಯಾಹ್ನ ಊಟ ಜೊತೆಗೆ ಮೊಟ್ಟೆ ಕೊಡುವ ವ್ಯವಸ್ಥೆ ಸರ್ಕಾರ ಮಾಡಿದೆ. ಮುಂದಿನ ವರ್ಷದಲ್ಲಿ 48,000 ಎಲ್ ಕೆ ಜಿ, ಯುಕೆಜಿ ಆರಂಭಿಸಲಾಗುವುದು ಎಂದರು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಸ್ಪೀಕರ್ ಯುಟಿ ಖಾದರ್ ಮಾತನಾಡಿ, ಶಿಕ್ಷಕರು ಪಡುವ ಪ್ರಯತ್ನ ಕೆ ಗೌರವ ಕೊಡುವ ಕೆಲಸ ನಾವು ಮಾಡಬೇಕು. ನಾವು ಬಲಿಷ್ಠ ವಾದರೆ ದೇಶದ ಬಲಿಷ್ಠ ವಾಗುವುದಿಲ್ಲ. ಮಕ್ಕಳು ಶಿಕ್ಷಣ ಪಡೆದು ಬಲಿಷ್ಠ ವಾದರೆ ಮಾತ್ರ ದೇಶ ಬಲಿಷ್ಠ ವಾಗಬಹುದು. ಮುಂದಿನ ವರ್ಷಗಳಲ್ಲಿ ಈ ಅಂಬ್ಲಮೊಗರು ಗ್ರಾಮ ದಲ್ಲಿ ವಿದ್ಯಾರ್ಥಿ ಗಳು ಇಂಜಿನಿಯರ್, ವೈದ್ಯಕೀಯ ಶಿಕ್ಷಣ ಪಡೆಯುವ ಮೂಲಕ ಒಂದು ಕ್ರಾಂತಿ ಕಾರಿ ಬದಲಾವಣೆ ಕೂಡಾ ಆಗಬೇಕು ಎಂದು ಕರೆ ನೀಡಿದರು.
ಐವನ್ ಡಿಸೋಜಾ ಮಾತನಾಡಿದರು. ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ರಫೀಕ್ ಅಂಬ್ಲಮೊಗರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿ ಎ.ಬಾವಾ, ಸದಾಶಿವ ಶೆಟ್ಟಿ ಕನ್ಯಾನ, ತಹಶೀಲ್ದಾರ್ ಪುಟ್ಟರಾಜು, ಅಕ್ಷರ ದಾಸೋಹ ಜಿಲ್ಲಾ ಶಿಕ್ಷಣಾಧಿಕಾರಿ ಜ್ಞಾನೇಶ್, ಕ್ಷೇತ್ರ ಸಮನ್ವಯಾಧಿಕಾರಿ ಸುಷ್ಮಾ ವಿ.ಕಿಣಿ, ಅಂಬ್ಲಮೊಗರು ಗ್ರಾ.ಪಂ.ಪಿಡಿಒ ಅಬ್ದುಲ್ ಖಾದರ್, ಅಧ್ಯಕ್ಷ ಮುಹಮ್ಮದ್ ಇಕ್ಬಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್, ಶತಮಾನೋತ್ಸವ ಸಮಿತಿ ಅಧ್ಯಕ್ಷ ಸಂಜೀವ ಶೆಟ್ಟಿ, ಎಸ್ ಡಿ ಎಂ ಸಿ ಅಧ್ಯಕ್ಷ ಅಬುಸಾಲಿ, ಗೌರವ ಮಾರ್ಗ ದರ್ಶಕ ಸುದರ್ಶನ್ ಶೆಟ್ಟಿ,ತಾ.ಪಂ.ಮಾಜಿ ಅಧ್ಯಕ್ಷ ಮುಹಮ್ಮದ್ ಮೋನು, ಕೆಎಂಕೆ ಮಂಜನಾಡಿ, ತ್ಯಾಗಂ ಹರೇಕಳ, ಡಾ.ಜಯಪ್ರಕಾಶ್ ನಾರಾಯಣ, ಪಿ.ಕೆ.ಮೊಹಮ್ಮದ್ ಅಶ್ರಫ್, ನಿತಿನ್ ಕೊಟ್ಟಾರಿ ಮತ್ತಿತರರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಜಗದೀಶ್ ಸ್ವಾಗತಿಸಿದರು. ಅಹ್ಮದ್ ಕುಂಞಿ ವಂದಿಸಿದರು.