ಕೋಟೆಕಾರ್: ಎಸ್ ವೈಎಸ್ ವತಿಯಿಂದ ಉಚಿತ ಸಾಮೂಹಿಕ ವಿವಾಹ
ಉಳ್ಳಾಲ: ಸುನ್ನೀ ಯುವಜನ ಸಂಘ ಮ್ಯಾರೇಜ್ ಸೆಲ್ ಕೆ.ಸಿ.ರೋಡ್ ಇದರ ಆಶ್ರಯದಲ್ಲಿ ಉಚ್ಚಿಲದಲ್ಲಿ 13ನೇ ವರ್ಷದ ಉಚಿತ ಸಾಮೂಹಿಕ ವಿವಾಹದ ಕಾರ್ಯಕ್ರಮ ರವಿವಾರ ನಡೆಯಿತು.
ಕಾರ್ಯಕ್ರಮದಲ್ಲಿ ಶಾಝಿಯಾ-ಮುಹಮ್ಮದ್ ಶರೀಫ್ ಪುದುವೆಟ್ಟು, ಆಯಿಷತ್ ಹಸೀನ- ತಾಜುದ್ದೀನ್ ಅಮಾನಿ, ತಾಜುನ್ನಿಸಾ-ಎ.ಎ. ಅಹ್ಮದ್ ಕಬೀರ್ ಮಡಿಕೇರಿ, ಆಸಿರಾ ಬಾನು-ಶರೀಫ್ ಎಸ್.ಇಮಮಿ ಭದ್ರಾವತಿ ನಾಲ್ಕು ಜೋಡಿ ದಾಂಪತ್ಯ ಪ್ರವೇಶಿಸಿದರು.
407 ಉಚ್ಚಿಲ ಎಸ್. ಜುಮಾ ಮಸೀದಿಯ ಮುದರ್ರಿಸ್ ಇಬ್ರಾಹಿಂ ಫೈಝಿ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿ, ಕಳೆದ 13 ವರ್ಷಗಳಿಂದ ಸಂಘಟನೆ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಹೆಣ್ಮಕ್ಕಳ ಮದುವೆ ಕಾರ್ಯಕ್ಕಾಗಿ ಚಿನ್ನಾಭರಣ ಸಹಿತ ಇತರ ದೊಡ್ಡ ಮಟ್ಟದ ಖರ್ಚು ವೆಚ್ಚ ಭರಿಸುತ್ತಿರುವುದು ಸಣ್ಣ ಸೇವೆಯಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕರ್ನಾಟಕ ಸುನ್ನೀ ಜಂಇಯತುಲ್ ಉಲಮಾ ಅಧ್ಯಕ್ಷ, ಖಾಝಿ ಝೈನುಲ್ ಉಲಮಾ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ನಿಖಾ ನೇತೃತ್ವ ವಹಿಸಿದ್ದರು. ಸೈಯದ್ ಹಾಮಿದ್ ತಂಙಳ್ ಮುಹಿಮ್ಮಾತ್ ದುಆ ನೆರವೇರಿಸಿದರು.
ಕರ್ನಾಟಕ ಸುನ್ನೀ ಜಂಇಯ್ಯತುಲ್ ಉಲಮಾ ಕಾರ್ಯದರ್ಶಿ ಹುಸೈನ್ ಸಅದಿ ಕೆ.ಸಿ.ರೋಡ್ ಅಧ್ಯಕತೆ ವಹಿಸಿದ್ದರು.
ಎಸ್ವೈಎಸ್ ಮ್ಯಾರೇಜ್ ಸೆಲ್ ಅಧ್ಯಕ್ಷ ಎಂ.ಬಿ.ಮುಹಮ್ಮದ್ ಹಾಜಿ, ಮುನೀರ್ ಸಖಾಫಿ ಅಲ್ ಫುರ್ಖಾನಿ, ಅಬ್ದುಲ್ಲಾ ಮದನಿ, ಮುಸ್ತಫ ಝುಹುರಿ, ಶಬೀರ್ ಅಶ್ಹರಿ, ಪಿ.ಐ.ಅಹ್ಮದ್ ಕುಂಞಿ ಹಾಜಿ, ಅಬ್ದುಲ್ ಮಜೀದ್ ಮಾಡೂರು, ಜಾಬಿರ್ ಹಿದಾಯತ್ ನಗರ, ಅಸ್ಗರ್ ತಲಪಾಡಿ, ಎ.ಎಂ.ಅಬ್ಬಾಸ್ ಹಾಜಿ ಮಜಲ್, ಹಿದಾಯತ್ ಉಚ್ಚಿಲ್, ಅಬ್ಬಾಸ್ ಉಚ್ಚಿಲ್ ಪೆರಿಬೈಲ್, ಅಬ್ದುಲ್ಲಾ ಸಿತಾರ್, ಉಸ್ಮಾನ್ ಕೆ.ಎ., ಖಾದರ್ ಮಕ್ಯಾರ್, ಅನ್ಸಾಫ್ ಗೋಲ್ಡ್ ಕಿಂಗ್, ಅಬ್ದುಲ್ ಸಲಾಂ ಉಚ್ಚಿಲ್, ಬಿ.ಎಚ್.ಇಸ್ಮಾಯೀಲ್, ಕೆ.ಇ.ಹಸೈನಾರ್, ಮೋನು ಹಾಜಿ ಪಂಜಾಲ, ಎಂ.ಪಿ.ಮುಹಮ್ಮದ್, ಹಾಫಿಲ್ ನಝೀರ್ ಸಖಾಫಿ ತಲಪಾಡಿ, ಕೆ.ಬಿ.ಯಹ್ಯಾ, ಬಶೀರ್ ಅಹ್ಸನಿ ಪಿಲಿಕೂರು, ಅಬ್ದುಲ್ ಸಲಾಂ ನಯಪಟ್ಣ, ಅಬ್ಬಾಸ್ ಪೂಮಣ್ಣ್ ಮೊದಲಾದವರು ಉಪಸ್ಥಿತರಿದ್ದರು.
ಎಸ್ವೈಎಸ್ ಮ್ಯಾರೇಜ್ ಸೆಲ್ ಸಂಚಾಲಕ ಎನ್.ಎಸ್.ಉಮರ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.