×
Ad

ಸುರತ್ಕಲ್: "ಸುಸ್ಥಿರ ಕೃಷಿ ಭವಿಷ್ಯ" ಕುರಿತ ವಿಚಾರ ಸಂಕಿರಣ

Update: 2025-01-28 19:37 IST

ಸುರತ್ಕಲ್: ಎನ್ಐಟಿಕೆ ಸುರತ್ಕಲ್ ನ ಸ್ಕೂಲ್ ಆಫ್ ಹ್ಯುಮಾನಿಟೀಸ್, ಸೋಷಿಯಲ್ ಸೈನ್ಸಸ್ ಮತ್ತು ಮ್ಯಾನೇಜ್ಮೆಂಟ್ ವತಿಯಿಂದ ಎಂಆರ್ಪಿಎಲ್ ಮತ್ತು ಮಂಗಳೂರಿನ ಎಂಸಿಎಫ್ ಜಂಟಿಯಾಗಿ ಪ್ರಾಯೋಜಿಸಿರುವ "ಸುಸ್ಥಿರ ಕೃಷಿ ಭವಿಷ್ಯ" ಎಂಬ ಎರಡು ದಿನಗಳ ವಿಚಾರ ಸಂಕಿರಣವು ಮಂಗಳವಾರ ಕ್ಯಾಂಪಸ್‌ ನಲ್ಲಿ ಚಾಲನೆ ದೊರೆಯಿತು.

"ಬೀಜಗಳನ್ನು ಬಿತ್ತನೆ ಮಾಡುವುದು" ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ನೀತಿ ಆಯೋಗದ ಆರ್ಥಿಕ ಕೋಶದ ನಿರ್ದೇಶಕ ಅಮಿತ್ ವರ್ಮಾ ಅವರು, ಭಾರತದ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ಬಲಪಡಿಸುವ, ರೈತರಲ್ಲಿ ಸುಸ್ಥಿರ ಕೃಷಿ ಪದ್ಧತಿಗಳನ್ನು ಪ್ರೋತ್ಸಾಹಿಸುವ ಮತ್ತು ವೃತ್ತಾಕಾರದ ಆರ್ಥಿಕತೆಯಲ್ಲಿ ಭಾರತವನ್ನು ಜಾಗತಿಕ ನಾಯಕತ್ವದತ್ತ ಕೊಂಡೊಯ್ಯುವ ನಿರ್ಣಾಯಕ ಅಗತ್ಯವನ್ನು ವಿವರಿಸಿದರು.

ಕರ್ನಾಟಕ ರಾಜ್ಯ ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರಾದ ಚನ್ನಪ್ಪ ಅಂಗಡಿ ಮತ್ತು ಎಸೆಕ್ಸ್ ವಿಶ್ವವಿದ್ಯಾಲ ಯದ ಪ್ರೊ. ನೀರಜ್ ಕುಮಾರ್ ಅವರು "ಸುಸ್ಥಿರ ಕೃಷಿ ಮತ್ತು ಕೃಷಿಯಲ್ಲಿ ಕ್ರಾಂತಿಕಾರಕ ಬದಲಾವಣೆಯಲ್ಲಿ ನಾವೀನ್ಯತೆಯ ಪಾತ್ರ" ಕುರಿತಾಗಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎನ್ಐಟಿಕೆ ಸುರತ್ಕಲ್ ನ ರಿಸರ್ಚ್ ಆ್ಯಂಡ್ ಕನ್ಸಲ್ಟೆನ್ಸಿ ಡೀನ್ ಪ್ರೊ. ಉದಯ್ ಭಟ್ ಕೆ. ವಹಿಸಿದ್ದರು. ಕಾರ್ಯಕ್ರಮದಲ್ಲಿ ಎನ್ಐಟಿಕೆ ಸುರತ್ಕಲ್ ನ ಪ್ರೊ. ರಿತಾಂಜಲಿ ಮಾಝಿ ಮತ್ತು ಯು.ಕೆ.ಯ ಎಸೆಕ್ಸ್ ವಿಶ್ವವಿದ್ಯಾಲಯದ ಪ್ರೊ. ನೀರಜ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News