ಶೀಘ್ರ ಬ್ಯಾರಿ ಭವನ ನಿರ್ಮಿಸಲು ಸ್ಪೀಕರ್ ಯು.ಟಿ. ಖಾದರ್ ರಿಗೆ ಮನವಿ
Update: 2025-01-30 22:00 IST
ಮಂಗಳೂರು: ಕೊಣಾಜೆ ಸಮೀಪದ ಅಸೈಗೋಳಿ ತಿಪ್ಲಪದವಿನಲ್ಲಿ ನೂತನ ಬ್ಯಾರಿ ಭವನವನ್ನು ಶೀಘ್ರ ನಿರ್ಮಿಸಬೇಕು ಎಂದು ಸ್ಪೀಕರ್ ಯು.ಟಿ. ಖಾದರ್‌ಗೆ ಪಬ್ಲಿಕ್ ವಾಯ್ಸ್ ವಾಟ್ಸ್‌ಆ್ಯಪ್ ಬಳಗದ ನಿಯೋಗವು ಮನವಿ ಸಲ್ಲಿಸಿದೆ.
ಸಾಮಾಜಿಕ ಹೋರಾಟಗಾರ ಫಾರೂಕ್ ಉಳ್ಳಾಲ್ ನೇತೃತ್ವದಲ್ಲಿ ಪಬ್ಲಿಕ್ ವಾಯ್ಸ್ ನಿಯೋಗದ ಪ್ರತಿನಿಧಿಗಳಾದ ಸಲಾಂ ಉಚ್ವಿಲ್, ಸಂಶುದ್ದೀನ್ ತಲೆಮೊಗರು, ಅಬ್ದುಲ್ ರವೂಫ್ ಕೊಳವೂರು, ಯೂಸುಫ್ ಸುಲ್ತಾನ್, ವನ್ಹರ್ ಕುಪ್ಪೆಪದವು ಉಪಸ್ಥಿತರಿದ್ದರು.