×
Ad

ಕುದ್ರೋಳಿ ಮಖಾಂ ಉರೂಸ್‌ಗೆ ಚಾಲನೆ

Update: 2025-02-01 23:16 IST

ಮಂಗಳೂರು , ಫೆ.1: ನಗರದ ಕುದ್ರೋಳಿ ಹಝ್ರತ್ ಸಯ್ಯಿದ್ ಖಾದಿರ್ ಷಾ ವಲಿಯುಲ್ಲಾಹಿ (ಖ ಸಿ) ದರ್ಗಾ ಶರೀಫ್‌ನಲ್ಲಿ ಪ್ರತೀ ಎರಡು ವರ್ಷಕ್ಕೊಮ್ಮೆ ಆಚರಿಸಿಕೊಂಡು ಬರುವ ಉರೂಸ್ ಕಾರ್ಯಕ್ರಮದಲ್ಲಿ ಶುಕ್ರವಾರ ಇಶಾ ನಮಾಝ್ ಬಳಿಕ ದರ್ಗಾ ಅಧ್ಯಕ್ಷ ಮುಸ್ತಾಕ್ ಅಧ್ಯಕ್ಷತೆಯಲ್ಲಿ ಬೃಹತ್ ಮೌಲಿದ್ ಹಾಗೂ ರಿಫಾಯಿ ರಾತೀಬ್ ಮಜ್ಲಿಸ್ ನಡೆಯಿತು.

ರಿಫಾಯಿ ರಾತೀಬ್ ಮಜ್ಲಿಸ್‌ನಲ್ಲಿ ಮೊಹ್ದಿನ್ ಪಳ್ಳಿ ಖತೀಬ್ ಕೆ.ಕೆ ಮುಹಮ್ಮದ್ ಬಾಖವಿ, ಕಂಡತ್ ಪಳ್ಳಿ ಖತೀಬ್ ಪಿ ಎ ಮುಹಮ್ಮದ್ ರಫೀಕ್ ಮದನಿ ಕಾಮಿಲ್ ಸಖಾಫಿ, ನಡುಪಳ್ಳಿ ಸದರ್ ಅಲಿ ಫೈಝಿ,ಮುಹದ್ದಿನ್ ಸಿರಾಜ್ ಪೈಝಿ , ಮೌಲಿದ್ ಆಲಾಪಣೆ ಅಶ್ರೀಫ್ ಸಅದಿ ಅಲ್ ಮಲ್ಹರಿ, ನಡುಪಳ್ಳಿ ಮಸೀದಿ ಅಧ್ಯಾಪಕರು,ದರ್ಗಾ ಸಮಿತಿ ಸದಸ್ಯರು, ನಡುಪಳ್ಳಿ ಜಮಾಅತ್ ಬಾಂಧವರು ಭಾಗವಹಿಸಿದ್ದರು. ರಿಫಾಯಿ ರಾತೀಬ್ ನೇತೃತ್ವವನ್ನು ಸಯ್ಯಿದ್ ಹಾಸಿಂ ಆಟ್ಟಕ್ಕೋಯಾ ತಂಳ್ ನಿಲಾಮಿಯ್ಯಿ ಕವರಟ್ಟಿ ಲಕ್ಷದೀಪ ವಹಿಸಿ ದುಆ ನೆರವೇರಿಸಿದರು.

ಮಗ್ರಿಬ್ ನಮಾಝ್ ಸಂದರ್ಭದಲ್ಲಿ ಬಂದರ್ ಮೌಲಾ ತಂಡದಿಂದ ಚಾದರ ಅರ್ಪಿಸಿ ಪ್ರಾರ್ಥನೆ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News