×
Ad

ಉಳ್ಳಾಲ: ಸಾರ್ವಜನಿಕ ಕೊಳವೆ ಬಾವಿ ಉದ್ಘಾಟನೆ

Update: 2025-02-05 21:42 IST

ಉಳ್ಳಾಲ: ಕುಡಿಯುವ ನೀರು ನಮಗೆ ಬೇಕು, ಇದನ್ನು ಮಿತವಾಗಿ ಬಳಸಿ ಜಾಗೃತಿ ಮೂಡಿಸುವ ಕೆಲಸ ಆಗಬೇಕು. ಈ ಹಿನ್ನೆಲೆಯಲ್ಲಿ ಜಮಾಅತೆ ಇಸ್ಲಾಮಿ ಹಿಂದ್ ಕೊಳವೆ ಬಾವಿ ನಿರ್ಮಾಣ ಮಾಡಿರುವುದು ಸ್ವಾಗತಾರ್ಹ ಎಂದು ಮಂಜನಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಸರೋಜಿನಿ ಅಭಿಪ್ರಾಯ ಪಟ್ಟರು.

ಅವರು ಜಮಾಅತೆ ಇಸ್ಲಾಮಿ ಹಿಂದ್ ಸಮಾಜ ಸೇವಾ ಘಟಕ ದೇರಳಕಟ್ಟೆ ಇದರ ಆಶ್ರಯದಲ್ಲಿ ಮಂಜನಾಡಿ ಗ್ರಾಮ ಪಂಚಾಯತ್ ಇದರ ಸಹಭಾಗಿತ್ವದಲ್ಲಿ ನಾಟೆಕಲ್ ಲ್ಲಿರುವ ಉಳ್ಳಾಲ ತಾಲೂಕು ಕಚೇರಿ ಬಳಿ ಸಾರ್ವಜನಿಕ ಕೊಳವೆ ಬಾವಿ ಉದ್ಘಾಟಿಸಿ ಮಾತನಾಡಿದರು.

ಸಮಾಜ ಸೇವಾ ಘಟಕದ ಸದಸ್ಯ ಅಹ್ಮದ್ ಶರೀಫ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಮಂಜನಾಡಿ ಗ್ರಾ.ಪಂ.ಸದಸ್ಯ ಅಬ್ಬಾಸ್ ಎಂ ಮಾತನಾಡಿದರು.

ಈ ಸಂದರ್ಭ ಶಾಂತಿ ಪ್ರಕಾಶನ ಪ್ರಕಟಿಸಿದ 'ಸಮಾಜ ಸೇವೆ' ಪುಸ್ತಕ ವನ್ನು ಜಿ.ಪಂ.ಮಾಜಿ ಸದಸ್ಯ ಅಝೀಝ್ ಮಲಾರ್ ಬಿಡುಗಡೆ ಮಾಡಿದರು. ಮಂಜನಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಎಂ., ಭವಾನಿ, ಬಶೀರ್, ಜಿ.ಪಂ. ಜಮಾಅತೆ ಇಸ್ಲಾಮಿ ಹಿಂದ್ ಸ್ಥಾನೀಯ ಅಧ್ಯಕ್ಷ ಅಬ್ದುಲ್ ಕರೀಂ, ಸಮಾಜಸೇವಾ ಘಟಕ ದೇರಳಕಟ್ಟೆ ಸಂಚಾಲಕ ಹಿದಾಯತುಲ್ಲ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು

ಇಸ್ಹಾಕ್ ಕಲ್ಲಾಪು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News