ಸಂಕಷ್ಟದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ; ಪತ್ನಿಯ ಚಿಕಿತ್ಸೆಗೆ ನೆರವಿಗೆ ಮನವಿ
Update: 2025-02-06 23:42 IST
ಮಂಗಳೂರು: ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಮೈಯ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಹಾಲಿಂಗ ನಾಯ್ಕ ಅವರ ಪತ್ನಿ ಲಲಿತ ಅಮೈ ಮೆದುಳಿನ ನರದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಚಿಕಿತ್ಸೆಗಾಗಿ ನೆರವು ನೀಡುವಂತೆ ಮಹಾಲಿಂಗ ನಾಯ್ಕ ಅವರು ಮನವಿ ಮಾಡಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿರುವ ಲಲಿತ ಅವರನ್ನು ತುರ್ತಾಗಿ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರ ಶಸ್ತ್ರ ಚಿಕಿತ್ಸೆಗೆ ಅಂದಾಜು ವೆಚ್ಚ 7 ಲಕ್ಷ ರೂ. ಆಗುತ್ತದೆ ಎಂದು ವೈದ್ಯರು ತಿಳಿಸಿರುವುದಾಗಿ ಮಹಾಲಿಂಗ ನಾಯ್ಕ ಮಾಹಿತಿ ನೀಡಿದ್ದಾರೆ. ಇಂತಹ ಕಷ್ಟಕರ ಪರಿಸ್ಥಿತಿಯಲ್ಲಿ ನನ್ನ ಕುಟುಂಬಕ್ಕೆ ಧನ ಸಹಾಯದ ಅಗತ್ಯವಿದೆ ಎಂದು ಮಹಾಲಿಂಗ ನಾಯ್ಕ ಹೇಳಿದ್ದಾರೆ.
ಮಹಾಲಿಂಗ ನಾಯ್ಕರ ಬ್ಯಾಂಕ್ ಖಾತೆ ಸಂಖ್ಯೆ:-
Malinga Naik
Canara Bank
Account no: 110037237088
IFSC CNRB0010141
Mobile: 9449981747