×
Ad

ಸ್ಪೀಕರ್ ಯು.ಟಿ.ಖಾದರ್ ವಿಶೇಷ ಮುತುವರ್ಜಿಯಿಂದ‌ ಪಜೀರು ಗ್ರಾಮಕ್ಕೆ ಏಳ್ನೂರು ಕೋಟಿ ರೂ. ಅನುದಾನ: ಪಜೀರು ಗ್ರಾಮ ಪಂ. ಅಧ್ಯಕ್ಷ ಮಹಮ್ಮದ್ ರಫೀಕ್

Update: 2025-02-07 19:35 IST

ಉಳ್ಳಾಲ: ಸ್ಪೀಕರ್ ಯು.ಟಿ.ಖಾದರ್ ಅವರ ವಿಶೇಷ ಮುತುವರ್ಜಿಯಿಂದ ಪಜೀರು ಗ್ರಾಮದಲ್ಲಿ ಏಳ್ನೂರು ಕೋಟಿ ರೂ. ಅನುದಾನದ ಕಾಮಗಾರಿಗಳು ಅನುಷ್ಟಾನಗೊಂಡಿದೆ ಎಂದು ಪಜೀರು ಗ್ರಾಮ ಪಂಚಾಯತ್ ಅಧ್ಯಕ್ಷ ಮಹಮ್ಮದ್ ರಫೀಕ್ ಹೇಳಿದರು.

ಪಜೀರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸಾಂಬಾರು ತೋಟದ, ಸಂಪತ್ ಮೈದಾನ ಅಂಗನವಾಡಿ ಕೇಂದ್ರದ ನೂತನ ಕಟ್ಟಡ ಕಾಮಗಾರಿಗೆ ಶುಕ್ರವಾರ ಶಿಲಾನ್ಯಾಸ ನೆರವೇರಿಸಿ‌ ಅವರು ಮಾತನಾಡಿದರು.

ಖಾದರ್ ಅವರ ವಿಶೇಷ ಅನುದಾನದಲ್ಲಿ ಗ್ರಾಮ ವ್ಯಾಪ್ತಿಯಲ್ಲಿ ಹಲವಾರು ಯೋಜನೆಗಳು ಅನುಷ್ಟಾನಗೊಂಡಿವೆ. ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯ ಫಿಲ್ಟರಿಂಗ್ ಘಟಕವನ್ನು ಪಜೀರು ಗ್ರಾಮ ವ್ಯಾಪ್ತಿಯ ಕಂಬಳಪದವಲ್ಲೇ ನಿರ್ಮಿಸಲಾಗಿದ್ದು ,ಅತೀ ಶೀಘ್ರವೇ ಅದು ಉದ್ಘಾಟನೆಗೊಳ್ಳಲಿದೆ. ಕಂಬಳಪದವಿನಲ್ಲಿ ಆರ್ ಟಿಒ ಕೇಂದ್ರ,ಅಗ್ನಿಶಾಮಕ ದಳದ ಘಟಕವೂ ಪ್ರಾರಂಭಗೊಳ್ಳಲಿದೆ. ಇದೀಗ ಬಹುಬೇಡಿಕೆಯ ಸಂಪತ್ ಮೈದಾನದ ನೂತನ ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣಕ್ಕೂ ಶಾಸಕ ಖಾದರ್ ಅವರ ವಿಶೇಷ ಅನುದಾನ ಬಿಡುಗಡೆಯಾಗಿದೆ ಎಂದರು.

ಈ ಕಾರ್ಯಕ್ರಮದಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಡಿ.ಎಸ್‌.ಗಟ್ಟಿ, ಪಜೀರು ಗ್ರಾ.ಪಂ ಉಪಾಧ್ಯಕ್ಷೆ ಫ್ಲೋರಿನ್ ಡಿ ಸೋಜ, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಪ್ರಶಾಂತ್ ಕಾಜವ, ತಾಲೂಕು ಅಕ್ರಮ-ಸಕ್ರಮ ಯೋಜನೆ ಸಮಿತಿಯ ಅಧ್ಯಕ್ಷರಾದ ಚಂದ್ರಹಾಸ್ ಕರ್ಕೇರ, ಅಂಗನವಾಡಿ ಸುಪರ್ ವೈಸರ್ ಮುಬೀನಾ, ಮೂಸಾ ಹಾಜಿ ಸಾಂಬಾರ ತೊಟ, ಮಾಜಿ ತಾ.ಪಂ.ಸದಸ್ಯ ಹೈದರ್ ಕೈರಂಗಳ, ಪಜೀರು ಗ್ರಾ.ಪಂ ಮಾಜಿ ಅಧ್ಯಕ್ಷ ನಝೀರ್ ಮೊಯ್ದಿನ್, ಇಮ್ತಿಯಾಝ್ ಪ್ರಮುಖರಾದ ಬಾದುಷಾ ಸಾಂಬಾರ್ ತೋಟ, ಗುತ್ತಿಗೆದಾರ ಅರುಣ್ ಡಿಸೋಜ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News