ಜೋಕಟ್ಟೆ: ಅಂಜುಮನ್ ಯತೀಂ ಮತ್ತು ಮಸಾಕೀನ್ ಕೇಂದ್ರದ ಬೆಳ್ಳಿ ಹಬ್ಬ
ಮಂಗಳೂರು, ಫೆ.7: ಜೋಕಟ್ಟೆಯ ಅಂಜುಮನ್ ಖುವ್ವತುಲ್ ಇಸ್ಲಾಂ (ರಿ) ಇದರ 56ನೇ ವಾರ್ಷಿಕೋತ್ಸವ ಮತ್ತು ಅಂಜುಮನ್ ಯತೀಂ ಮತ್ತು ಮಸಾಕೀನ್ ಕೇಂದ್ರದ ಬೆಳ್ಳಿ ಹಬ್ಬ ಕಾರ್ಯಕ್ರಮ ಹಾಗೂ ಸನದುದಾನ ಮಹಾ ಸಮ್ಮೇಳನವು ಕ್ರಮವಾಗಿ ಇತ್ತೀಚೆಗೆ ಅಂಜುಮನ್ ಯತೀಂ ಖಾನದ ಆವರಣದಲ್ಲಿ ನಡೆಯಿತು.
ಬೆಳ್ಳಿ ಹಬ್ಬ ಮತ್ತು ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ಹೊಸ ಮೊಹಿದ್ದೀನ್ ಜುಮಾ ಮಸೀದಿಯ ಖತೀಬ್ ಇ.ಎಂ. ಅಬ್ದುಲ್ ರಹ್ಮಾನ್ ದಾರಿಮಿ ಅಲ್ ಹಾಮಿದಿ ಪಾತೂರು ಉದ್ಘಾಟಿಸಿದರು. ಹಳೆ ಮೊಹಿದ್ದೀನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಮಿಸ್ಬಾನಿ ದುಆಗೈದರು. ಅಂಜುಮನ್ ಖುವ್ವತುಲ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಮುಹಮ್ಮದ್ ಸಿರಾಜ್ ಮನೆಗಾರ ಅಧ್ಯಕ್ಷತೆ ವಹಿಸಿದ್ದರು. ಅಂಜುಮನ್ ಯತೀಂ ಮತ್ತು ಮಸಾಕೀನ್ ಕೇಂದ್ರದ ಬೆಳ್ಳಿ ಹಬ್ಬದ ಪ್ರಯುಕ್ತ ಹೊರತರಲಾದ ಸ್ಮರಣ ಸಂಚಿಕೆಯನ್ನು ಎಕ್ಸ್ಪಟೈಸ್ ಕಂಪೆನಿಯ ಉಪಾಧ್ಯಕ್ಷ ಅಬ್ದುಲ್ ರಹ್ಮಾನ್ ಕರ್ನಿರೆ ಬಿಡುಗಡೆ ಗೊಳಿಸಿದರು. ಮುಸ್ಲಿಂ ವಿದ್ಯಾ ಸಂಸ್ಥೆಗಳ ಒಕ್ಕೂಟದ ದ.ಕ. ಮತ್ತು ಉಡುಪಿ ಅಧ್ಯಕ್ಷ ಮೂಸಬ್ಬ ಪಿ.ಬ್ಯಾರಿ ಪ್ರಾಸ್ತಾವಿಕ ಭಾಷಣ ಮಾಡಿದರು. ಮುಖ್ಯ ಅತಿಥಿಗಳಾಗಿ ಈದ್ಗಾ ಜುಮಾ ಮಸೀದಿಯ ಖತೀಬ್ ಶರೀಫ್ ಹನೀಫಿ ಪರಪ್ಪು, ಅಂಜುಮನ್ ಖುವ್ವತುಲ್ ಇಸ್ಲಾಂ ಸಂಸ್ಥೆಯ ಮಾಜಿ ಅಧ್ಯಕ್ಷರಾದ ಬಿ.ಎಸ್.ಹುಸೈನ್, ಬಿ.ಎ. ರಶೀದ್, ಹಳೆ ಜುಮಾ ಮಸೀದಿಯ ಅಧ್ಯಕ್ಷ ಬಿ.ಎಸ್.ಬಶೀರ್ ಅಹ್ಮದ್, ಮೊಹಿಯುದ್ದೀನ್ ಹೊಸ ಜುಮ್ಮಾ ಮಸೀದಿ ಉಪಾಧ್ಯಕ್ಷ ಹಾಜಿ ಬಿ.ಎಸ್. ಶರೀಫ್, ಸಮಾಜ ಸೇವಕರಾದ ಜತ್ತಬೆಟ್ಟು ಮುಹಮ್ಮದ್ ಕೃಷ್ಣಾಪುರ, ಸ್ಮರಣ ಸಂಚಿಕೆಯ ಪ್ರಧಾನ ಸಂಪಾದಕ, ಕವಿ ಹುಸೈನ್ ಕಾಟಿಪಳ್ಳ, ಜೋಕಟ್ಟೆ ಗ್ರಾಪಂ ಅಧ್ಯಕ್ಷ ಉಮರುಲ್ ಫಾರೂಕ್ ಭಾಗವಹಿಸಿದ್ದರು.
ಅಂಜುಮನ್ ಖುವ್ವತುಲ್ ಇಸ್ಲಾಂ ಸಂಸ್ಥೆಯ ಉಪಾಧ್ಯಕ್ಷ ಎಂ.ಎಚ್.ಅಬ್ದುಲ್ ರಶೀದ್ ಕೊಪ್ಪ, ಪ್ರಧಾನ ಕಾರ್ಯದರ್ಶಿ ಮೊಹಿದ್ದೀನ್ ಶರೀಫ್ ಎಚ್‌ಪಿಸಿಎಲ್, ಕೋಶಾಧಿಕಾರಿ ಮುಹಮ್ಮದ್ ರಶೀದ್ ಬಾವಾ ಜಿ., ಲೆಕ್ಕಪರಿಶೋಧಕ ಹಾಜಿ ಟಿ. ಅಬೂಬಕ್ಕರ್, ಅಂಜುಮನ್ ಯತೀಮ್ ಮತ್ತು ಮಸಾಕೀನ್ ಕೇಂದ್ರದ ಸಂಚಾಲಕ ಖಾದರ್ ಗೋವಾ, ಸಹ ಸಂಚಾಲಕ ರಾದ ಶಂಸುದ್ದೀನ್ ಅರಿಕೆರೆ, ಮುಹಮ್ಮದ್ ನಾಸಿರ್, ಝಾಕಿರ್ ದೇವಸಮನೆ, ಜೊತೆ ಕಾರ್ಯದರ್ಶಿ ಪಿ.ಎಚ್. ರಫೀಕ್, ಮುಹಮ್ಮದ್ ಅಮೀರುದ್ದೀನ್, ಅಮೀನ್, ವಿದ್ಯಾ ಸಂಸ್ಥೆಯ ಸಂಚಾಲಕ ಹಾಜಿ ಅಮೀರುದ್ದೀನ್ ಬಾವಾಜಿ, ಸಹ ಸಂಚಾಲಕ ಜಿ.ಎಂ.ಶಂಸುದ್ದೀನ್, ಸಾಂಸ್ಕೃತಿಕ ಕಾರ್ಯದರ್ಶಿ ಸಾಹುಲ್ ಹಮೀದ್, ವೈದ್ಯಕೀಯ ಕೇಂದ್ರದ ಸಂಚಾಲಕ ಹಾಜಿ ಸುಲೈಮಾನ್ ಬೊಟ್ಟು, ಮಹಿಳಾ ಶರೀಅತ್ ಸಂಚಾಲಕ ಬಿ.ಎಚ್. ಖಾದರ್, ಉಪ ಸಂಚಾಲಕ ಮನ್ಸೂರ್ ಅರಿಕೆರೆ ಉಪಸ್ಥಿತರಿದ್ದರು.
ಅಧ್ಯಕ್ಷ ಮುಹಮ್ಮದ್ ಸಿರಾಜ್ ಮನೆಗಾರ ಸ್ವಾಗತಿಸಿದರು. ಕಳವಾರು ಜುಮಾ ಮಸೀದಿಯ ಖತೀಬ್ ಪಿ.ಎಂ. ಅಬ್ದುಲ್ಲಾಹಿ ನಯೀಮಿ ಅಲ್ ಮುರ್ಷಿದಿ ಜೋಕಟ್ಟೆ ಕಾರ್ಯಕ್ರಮ ನಿರೂಪಿಸಿದರು.