ಅಮಲು ಪದಾರ್ಥ ಸೇವನೆ ಪ್ರಕರಣ: ಮೂವರ ಸೆರೆ
Update: 2025-02-08 21:14 IST
ಮಂಗಳೂರು, ಫೆ.8: ನಗರದ ಅತ್ತಾವರ ಕೆಎಂಸಿ ಆಸ್ಪತ್ರೆಯ ಬಳಿ ಸಾರ್ವಜನಿಕ ರಸ್ತೆಯ ಬದಿ ಅಮಲು ಪದಾರ್ಥ ಸೇವನೆ ಮಾಡಿದ ಆರೋಪದ ಮೇರೆಗೆ ಮೂವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.
ಸಾಹಿದ್ ಮಲಿಕ್ (36), ಇರ್ಷಾದ್ (27), ನವಾಫ್ (23) ಬಂಧಿತ ಆರೋಪಿಗಳು. ಇವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.