ಉಳ್ಳಾಲ : ಎನ್ ಎನ್ ಒ ವತಿಯಿಂದ ಚೆಕ್ ವಿತರಣೆ
ಉಳ್ಳಾಲ : ಎಸೆಸೆಲ್ಸಿ, ಪಿಯುಸಿ ವಿದ್ಯಾರ್ಜನೆ ಮಾಡುವ ವಿದ್ಯಾರ್ಥಿಗಳ ಪೈಕಿ ಬೇರೆ ಬೇರೆ ಕಾರಣಗಳಿಂದ ಶುಲ್ಕ ಬಾಕಿ ಇರುವ ವಿದ್ಯಾರ್ಥಿಗಳಿಗೆ ನೆರವು ನೀಡುವ ಗುರಿ ಇಡಲಾಗಿದೆ. ವಿದ್ಯಾಭ್ಯಾಸ ಮಾಡುವ ಸಂದರ್ಭದಲ್ಲಿ ತಂದೆಯನ್ನು ಕಳೆದುಕೊಂಡ ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯಲು ಆರ್ಥಿಕ ಅಡಚಣೆ ಬರುವುದು ಸಾಮಾನ್ಯ.ಅಂತಹ ವಿದ್ಯಾರ್ಥಿಗಳ ಶಿಕ್ಷಣ ಮೊಟಕು ಆಗುವುದನ್ನು ತಪ್ಪಿಸಲು ಅವರ ಬಾಕಿ ಶುಲ್ಕ ಪಾವತಿ ಮಾಡಲು ನಿರ್ಧರಿಸಲಾಗಿದೆ ಎಂದು ಎನ್ ಎನ್ ಒ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಫೀಕ್ ಮಾಸ್ಟರ್ ಹೇಳಿದರು
ಅವರು ನಮ್ಮ ನಾಡ ಒಕ್ಕೂಟ ಇದರ ಆಶ್ರಯದಲ್ಲಿ ತೊಕ್ಕೊಟ್ಟು ಕಚೇರಿಯಲ್ಲಿ ಆರ್ಥಿಕ ಕಷ್ಟದಲ್ಲಿರುವ ಅನಾಥ ಮಕ್ಕಳಿಗೆ ಶಾಲಾ ಶುಲ್ಕ ಪಾವತಿ ಮಾಡುವ ಕಾರ್ಯ ಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಬಾಕಿ ಶುಲ್ಕ ಮೊತ್ತದ ಚೆಕ್ ನ್ನು ಪೋಷಕರಿಗೆ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಎನ್ ಎನ್ ಒ ಜಿಲ್ಲಾ ಅಧ್ಯಕ್ಷ ಡಾ.ಆರೀಫ್ ಮಸೂದ್, ಮಂಗಳೂರು ಕಮ್ಯುನಿಟಿ ಸೆಂಟರ್ ಅಧ್ಯಕ್ಷ ವಕೀಲ ಶೇಖ್ ಇಸಾಕ್, ಟಿಆರ್ ಎಫ್ ಪ್ರಧಾನ ಕಾರ್ಯದರ್ಶಿ ಹಮೀದ್ ಕಣ್ಣೂರು, ಸಾಗರ್ ಸಂಸ್ಥೆ ಮಾಲಕ ಇಸ್ಮಾಯಿಲ್, ಅಡ್ವೊಕೇಟ್ ಫೈಝಲ್, ಸಮದ್ ಸ್ಮಾರ್ಟ್ ಸಿಟಿ ಉಪಸ್ಥಿತರಿದ್ದರು.