×
Ad

ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಉಚಿತ ಎನ್‌ಇಇಟಿ, ಸಿಇಟಿ ಕ್ರ್ಯಾಶ್ ಕೋರ್ಸ್ ಸೌಲಭ್ಯ

Update: 2025-02-13 20:04 IST

ಮಂಗಳೂರು, ಫೆ.13: ಮುಸ್ಲಿಮ್ ಶಿಕ್ಷಣ ಸಂಸ್ಥೆಗಳ ಒಕ್ಕೂಟ ಮೀಫ್ ಮತ್ತು ಯೆನೆಪೊಯ ವಿದ್ಯಾ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಮಂಗಳೂರಿನ ಬಲ್ಮಠ ಯೆನೆಪೋಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ 45 ದಿವಸಗಳ ಉಚಿತ ಎನ್‌ಇಇಟಿ , ಸಿಇಟಿ ಕ್ರ್ಯಾಶ್ ಕೋರ್ಸ್ ಸೌಲಭ್ಯ ಏರ್ಪಡಿಸಲಾಗಿದೆ. ಈ ತರಗತಿಗಳು ಮಾ. 21ರಂದು ಆರಂಭಗೊಳ್ಳಲಿದೆ.

ಯೆನೆಪೊಯ ಪಿ.ಯು ಕಾಲೇಜಿನ ಕಾಲೇಜಿನ ಎನ್‌ಇಇಟಿ , ಸಿಇಟಿ ಪರಿಣಿತ ತರಬೇತುದಾರರು ಈ ತರಬೇತಿಯನ್ನು ನಡೆಸಲಿದ್ದಾರೆ.

ಸೀಮಿತ ಸೀಟುಗಳು ಮಾತ್ರ ಲಭ್ಯವಿರುವುದು. ಸೀಟುಗಳ ಆಯ್ಕೆ ಸಂಧರ್ಭ ಮೀಫ್ ವಿದ್ಯಾ ಸಂಸ್ಥೆಗಳಲ್ಲಿ ವಿದ್ಯಾರ್ಜನೆ ನಡೆಸಿರುವ ವಿದ್ಯಾರ್ಥಿಗಳಿಗೆ ಪ್ರಥಮ ಆದ್ಯತೆ ನೀಡಲಾಗುವುದು.

ಎನ್‌ಇಇಟಿ , ಸಿಇಟಿ ಆಕಾಂಕ್ಷಿ ಗಳು ಮೀಫ್ ಕಚೇರಿಯ ವ್ಯಾಟ್ಸಪ್ ಸಂಖ್ಯೆ 8792115666 ಮೂಲಕ ಅರ್ಜಿ ಪಡೆಯಬಹುದು. ಅರ್ಜಿ ಸಲ್ಲಿಸಲು ಕೊನೆಯ ಫೆ. 17 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ ಕನ್ವಿನರ್‌ಗಳಾದ ಬಿ.ಎ ಇಕ್ಬಾಲ್ - 9343562737 ಮತ್ತು ಮುಹಮ್ಮದ್ ಶಹಾಮ್ 8722038664 ರವರನ್ನು ಸಂಪರ್ಕಿಸಬಹುದು ಎಂದು ಮೀಫ್ ಅಧ್ಯಕ್ಷ ಮೂಸಬ್ಬ ಬ್ಯಾರಿ ಜೋಕಟ್ಟೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News