ಮಂಗಳೂರು: ಅಲ್ ಅಝ್ಹರಿಯ ಮದ್ರಸದ ಸನದುದಾನ
ಮಂಗಳೂರು: ನಗರದ ಅಲ್ ಅಝ್ಹರಿಯ ಮದ್ರಸದ ೯೭ನೇ ವಾರ್ಷಿಕ ಹಾಗೂ ಆರನೇ ಸನದುದಾನ ಕಾರ್ಯಕ್ರಮವು ಗುರುವಾರ ನಡೆಯಿತು.
ಸಂಸ್ಥೆಯ ಅಧ್ಯಕ್ಷ ಹಾಜಿ ಎಸ್‌ಎಂ ರಶೀದ್ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ಅಲ್‌ಅಝ್ಹರಿ ದುಆಗೈದು ಸನದು ಪ್ರದಾನಗೈದರು.
ಯೇನೆಪೋಯ ವಿಶ್ವವಿದ್ಯಾನಿಲಯದ ಕುಲಾಧಿಪತಿ ಡಾ.ವೈ.ಅಬ್ದುಲ್ಲಾ ಕುಂಞಿ ಕಾರ್ಯಕ್ರಮ ಉದ್ಘಾಟಿಸಿದರು. ಮದ್ರಸದ ಮುದರ್ರಿಸ್ ಹೈದರ್ ಮದನಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬ್ ಅಬುಲ್ ಅಕ್ರಂ ಮುಹಮ್ಮದ್ ಬಾಖವಿ, ಬದ್ರಿಯಾ ಜುಮಾ ಮಸೀದಿಯ ಖತೀಬ್ ಅಬೂಬಕರ್ ದಾರಿಮಿ, ಕಾರ್ಪೊರೇಟರ್ ಅಬ್ದುಲ್ ಲತೀಫ್ ಕಂದಕ್ ಮಾತನಾಡಿದರು.
ಈ ಸಂದರ್ಭ ಉಪಾಧ್ಯಕ್ಷ ಹಾಜಿ ಸಿ.ಕೆ. ಅಹ್ಮದ್, ಕೋಶಾಧಿಕಾರಿ ಅಬ್ದುಲ್ ಗಪೂರ್, ಜೊತೆ ಕಾರ್ಯದರ್ಶಿ ಹಾಜಿ ಅಬ್ದುಲ್ ಖಾದರ್, ಲೆಕ್ಕ ಪರಿಶೋಧಕ ಹಾಜಿ ರಿಯಾಝ್ ಬುರ್ಖಾ, ಮ್ಯಾನೇಜರ್‌ಗಳಾದ ಹಾಜಿ ಫಝಲ್ ಮುಹಮ್ಮದ್, ಹಾಜಿ ಅರ್ಷದ್, ಹಾಜಿ ರಿಯಾಝುದ್ಧೀನ್, ಅಶ್ರಫ್ ಹಳೆಮನೆ, ಕಾರ್ಯಕಾರಿ ಸಮಿತಿ ಸದಸ್ಯರಾದ ಸಫಾ ಸಲೀಂ, ಅಬ್ದುಲ್ ಹಮೀದ್, ಹಾಜಿ ಅಬ್ದುಲ್ ಸಮದ್, ಕೆ.ಪಿ. ರಶೀದ್, ಝಾಕಿರ್ ಕೋಝೀಕಾನ್, ಅಸಿಸ್ಟೆಂಟ್ ಮುದರ್ರಿಸ್‌ರಾದ ಅಬೂಬಕರ್ ಮದನಿ, ಸೈಯದ್ ಶಾಹುಲ್ ಹಮೀದ್ ತಂಳ್ ಉಪಸ್ಥಿತರಿದ್ದರು.
ಸೀನಾನ್ ಅಝ್ಹರಿ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹನೀಫ್ ಸ್ವಾಗತಿಸಿ, ವಂದಿಸಿದರು.