ವಿಟ್ಲ ಕೇಂದ್ರ ಜುಮಾ ಮಸೀದಿ: ಉರೂಸ್ ಅಂಗವಾಗಿ ಧ್ವಜಾರೋಹಣ
ವಿಟ್ಲ ; ವಿಟ್ಲ ಕೇಂದ್ರ ಜುಮಾ ಮಸೀದಿಯಲ್ಲಿ ಫೆಬ್ರವರಿ 19 ರಿಂದ 21 ರವರೆಗೆ ನಡೆಯುವ ಧಾರ್ಮಿಕ ಮತಪ್ರವಚನ ಹಾಗೂ ಉರೂಸ್ ಅಂಗವಾಗಿ ಧ್ವಜಾರೋಹಣ ಮಾಡಲಾಯಿತು.
ಮಸೀದಿ ಅಧ್ಯಕ್ಷ ಅಶ್ರಫ್ ಮಹಮ್ಮದ್ ಪೊನ್ನೋಟು, ಉರೂಸ್ ಸಮಿತಿ ಅಧ್ಯಕ್ಷ ವಿ.ಕೆ.ಎಂ.ಅಶ್ರಫ್ ಧ್ವಜಾರೋಹಣ ಮಾಡಿದರು. ಖತೀಬ್ ದಾವೂದ್ ಹನೀಫಿ ದುವಾ ನೆರವೇರಿಸಿದರು.
ಮಸೀದಿ ಉಪಾಧ್ಯಕ್ಷ ಮಹಮ್ಮದ್ ಗಮಿ, ಕಾರ್ಯದರ್ಶಿ ಇಸ್ಮಾಯಿಲ್ ಶಾಫಿ, ಜೊತೆ ಕಾರ್ಯದರ್ಶಿ ಅಬೂಬಕರ್ ಅನಿಲಕಟ್ಟೆ, ಕೋಶಾಧಿಕಾರಿ ಶರೀಫ್ ಪೊನ್ನೋಟು, ಹೊರೈಝನ್ ಪಬ್ಲಿಕ್ ಸ್ಕೂಲ್ ಅಧ್ಯಕ್ಷ ಅಝೀಝ್ ಸನ, ಉರೂಸ್ ಸಮಿತಿ ಉಪಾಧ್ಯಕ್ಷ ಇಸ್ಮಾಯಿಲ್ ಪರ್ತಿಪಾಡಿ, ಕಾರ್ಯದರ್ಶಿ ರಫೀಕ್ ಪೊನ್ನೋಟು, ಜೊತೆ ಕಾರ್ಯದರ್ಶಿ ಮಹಮ್ಮದ್ ಅಲಿ,, ಕೋಶಾಧಿಕಾರಿ ಬಿ.ಎಂ.ಅಬ್ದುಲ್ ಖಾದರ್, ಶರೀಫ್ ಮುಸ್ಲಿಯಾರ್ ಅಲಾದಿ, ಮದರಸ ಅಧ್ಯಕ್ಷ ಶಮೀರ್ ಪಳಿಕೆ, ವಿ.ಕೆ.ಎಂ.ಹಂಝ, ಅಂದುಞಿ ಗಮಿ, ಹನೀಫ್ ರೆಡ್, ಅಬ್ದುಲ್ ರಹಿಮಾನ್, ರಶೀದ್ ನೆತ್ರೆಕೆರೆ ,ರಫೀಕ್ ಎಂ.ಜಿ.ಆರ್. ಇಕ್ಬಾಲ್ ಶೀತಲ್ ಮುಂತಾದವರು ಉಪಸ್ಥಿತರಿದ್ದರು.